ವಿಶಾಖಪಟ್ಟಣಂ: ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶನದ ಕ್ಯಾಪ್ ಧರಿಸುತ್ತಿದ್ದಾರೆ.
ಹೌದು.. ಅಭಿಮಾನಿಗಳ ಬಹು ದಿನಗಳ ನಿರೀಕ್ಷೆಯಂತೆ ರಿಯಲ್ ಸ್ಚಾರ್ ಉಪೇಂದ್ರ ಹೊಸ ಚಿತ್ರವೊಂದಕ್ಕೆ ನಿರ್ದೇಶನ ಮಾಡುತ್ತಿದ್ದು, ಈ ವಿಚಾರವನ್ನು ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ.
ವಿಶಾಖಪಟ್ಟಣದಲ್ಲಿ ತಮ್ಮ ಬಹು ನಿರೀಕ್ಷಿತ ಐ ಲವ್ ಯೂ ಚಿತ್ರದ ತೆಲುಗು ಅವತರಣಿಕೆಯ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಉಪೇಂದ್ರ ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ. ''ಸಿನಿಮಾ ನಿರ್ದೇಶನ ಮಾಡುವುದೆಂದರೆ ನನಗೆ ಹೆಚ್ಚು ಖುಷಿ. ಮತ್ತೆ ನಾನು ಆ್ಯಕ್ಷನ್ ಕಟ್ ಹೇಳುತ್ತೇನೆ ಎಂದು ಉಪೇಂದ್ರ ಹೇಳಿದರು.
ಅಶ್ಲೀಲತೆ ಅಲ್ಲ, ಪಾತ್ರಕ್ಕೆ ತಕ್ಕಂತೆ ಅವರು ನಟಿಸಿದ್ದಾರೆ
ಇದೇ ವೇಳೆ ಚಿತ್ರದಲ್ಲಿನ ರಚಿತಾ ರಾಮ್ ಪಾತ್ರದ ಕುರಿತು ಮಾತನಾಡಿದ ಉಪೇಂದ್ರ, 'ನಟಿ ರಚಿತಾ ರಾಮ್ ಈ ಚಿತ್ರದಲ್ಲಿ ಎರಾಟಿಕ್ ದೃಶ್ಯಗಳಲ್ಲಿ ಕಾಣಿಕೊಂಡಿದ್ದಾರೆ. ಇದು ಅಶ್ಲೀಲತೆ ಅಲ್ಲ. ಪಾತ್ರಕ್ಕೆ ತಕ್ಕಂತೆ ಅವರು ನಟಿಸಿದ್ದಾರೆ. ಅವರೂ ಕೂಡ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ' ಎಂದರು.
ಇನ್ನು ನಟ ಉಪೇಂದ್ರ 2015ರಲ್ಲಿ ಉಪ್ಪಿ-2 ಬಳಿಕ ಯಾವುದೇ ಚಿತ್ರ ನಿರ್ದೇಶನ ಮಾಡಿದ್ದರು. ಈ ಚಿತ್ರದ ಭರ್ಜರಿ ಯಶಸ್ಸೂ ಕಂಡಿತ್ತೂ. ಆ ಬಳಿಕ ಉಪೇಂದ್ರ ನಿರ್ದೇಶನ ಮಾಡಿರಲಿಲ್ಲ. ಅಲ್ಲದೆ ಇತ್ತೀಚೆಗೆ ತಮ್ಮದೇ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿ ರಾಜಕೀಯ ಅಂಗಳಕ್ಕೆ ಇಳಿದಿದ್ದರು.