ಸೂರಜ್ ಕುಮಾರ್ 
ಸಿನಿಮಾ ಸುದ್ದಿ

ರಘು ಕೋವಿ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಸೂರಜ್ ಕುಮಾರ್ ನಾಯಕ ನಟ

ಮಲಯಾಳಂ ಹಿರೋಯಿನ್ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಕನ್ನಡ ಚಿತ್ರಕ್ಕೆ ಕರೆತರುತ್ತಿರುವ ರಘು ಕೋವಿ ಅವರ ಚೊಚ್ಚಲ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ನಾಯಕ ನಟನನ್ನು ಪರಿಚಯಿಸಲಾಗುತ್ತಿದೆ.

ಬೆಂಗಳೂರು:  ಮಲಯಾಳಂ ಹಿರೋಯಿನ್ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಕನ್ನಡ ಚಿತ್ರಕ್ಕೆ  ಕರೆತರುತ್ತಿರುವ ರಘು ಕೋವಿ ಅವರ ಚೊಚ್ಚಲ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ  ಹೊಸ  ನಾಯಕ ನಟನನ್ನು ಪರಿಚಯಿಸಲಾಗುತ್ತಿದೆ. 
ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಎಸ್.ಎ. ಶ್ರೀನಿವಾಸ್ ಅವರ ಮಗ ಸೂರಜ್  ಕುಮಾರ್ ಈ ಚಿತ್ರದ ಮೂಲಕ ನಾಯಕ ನಟರಾಗುತ್ತಿದ್ದಾರೆ.
ನಿರ್ಮಾಪಕರಾದ ಬಿ. ಎಸ್ ಸುಧೀಂದ್ರ ಹಾಗೂ ಇ . ಶಿವಪ್ರಕಾಶ್ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದು, ಸೂರಜ್  ಕುಮಾರ್ ಅವನ್ನೇ ಅಂತಿಮಗೊಳಿಸಿದ್ದಾರೆ.ಸೂರಜ್ ಕುಮಾರ್ ಚೆನ್ನೈನಲ್ಲಿ  ಸಾಹಸ ಹಾಗೂ ನೃತ್ಯ ತರಬೇತಿ ಪಡೆದುಕೊಂಡಿದ್ದು, ನೀನಾಸಂ ಹಾಗೂ ಟೆಂಟ್ ಸಿನಿಮಾದಲ್ಲಿ ಅಭಿನಯ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. 
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೂರಜ್ ಹಿಂದಿದ್ದು, ಮಾರ್ಗದರ್ಶನ ನೀಡುತ್ತಿದ್ದಾರೆ. ಐರಾವತ ಹಾಗೂ ತಾರಕ್ ಸಿನಿಮಾಗಳಲ್ಲಿ  ರಘು ಕೋವಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಸಿನಿಮಾದ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆದುಕೊಂಡಿದ್ದಾರೆ.
ಸದ್ಯದಲ್ಲೇ ಸೂರಜ್ ಕುಮಾರ್ ಹಾಗೂ ಪ್ರಿಯಾ ವಾರಿಯರ್ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುವುದು, ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗುವು ಸಾಧ್ಯತೆ ಇದೆ ಎಂದು ಚಿತ್ರ ತಂಡ ತಿಳಿಸಿದೆ ಅಂದಹಾಗೆ ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದು, ಸತ್ಯ ಹೆಗಡೆ ಕ್ಯಾಮರಾ ನಿರ್ವಹಣೆ ಮಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT