'ರಾಬರ್ಟ್' ಗೆ ಪಂಜಾಬಿ ಬೆಡಗಿ ಜೋಡಿ?
ತರುಣ್ ಕಿಶೋರ್ ನಿರ್ದೇಶಿಸಿ ದರ್ಶನ್ ನಟಿಸಿರುವ ರಾಬರ್ಟ್ ಸಿನಿಮಾ ತನ್ನ ಪೋಸ್ಯರ್ ಗಳಿಂದಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ರಾಬರ್ಟ್ ಗೆ ನಾಯಕಿ ಯಾರು ಎಂಬ ...
ತರುಣ್ ಕಿಶೋರ್ ನಿರ್ದೇಶಿಸಿ ದರ್ಶನ್ ನಟಿಸಿರುವ ರಾಬರ್ಟ್ ಸಿನಿಮಾ ತನ್ನ ಪೋಸ್ಯರ್ ಗಳಿಂದಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ರಾಬರ್ಟ್ ಗೆ ನಾಯಕಿ ಯಾರು ಎಂಬ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ಮೆಹ್ರೆನ್ ಕೌರ್ ಪಿರ್ಜಾಡಾ ನಟಿಸಲಿದ್ದಾರೆ. ಬಾಲಿವುಡ್ ನಲ್ಲಿ ಚೊಚ್ಚಲ ಸಿನಿಮಾದಲ್ಲಿ ನಟಿಸಿರುವ ಪಂಜಾಬಿ ಹುಡುಗಿ ತೆಲುಗು ಸಿನಿಮಾದ ನೋಟಾದಲ್ಲಿ ಅಭಿನಯಿಸಿದ್ದಾರೆ, ವಿಜಯ್ ದೇವರಕೊಂಡ ಜೊತೆ ಹಾಗೂ ಮಲ್ಟಿ ಸ್ಟಾರರ್ ಸಿನಿಮಾವಾಗಿರುವ ಎಫ್2 ದಲ್ಲೂ ನಟಿಸಿದ್ದಾರೆ, ಸದ್ಯ ತಮಿಳಿನಲ್ಲಿ ಧನುಷ್ ಜೊತೆಗೂ ನಾಯಕಿಯಾಗಿ ನಟಿಸಲಿದ್ದಾರೆ.
ಮೆಹ್ರಿನ್ ಜೊತೆ ಹಲವು ನಾಯಕಿಯರ ಹೆಸರು ಕೇಳಿ ಬಂದಿದ್ದು, ಮೆಹ್ರಿನ್ ಪೈನಲ್ ಆಗಿದ್ದಾರೆ, ಆದರೆ ಈ ಬಗ್ಗೆ ನಿರ್ದೇಶಕರು ಮತ್ತು ನಿರ್ಮಾಪಕರು ಅಧಿಕೃತವಾಗಿ ಘೋಷಿಸಬೇಕಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.