ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಮೇಘನಾ ರಾಜ್-ಆರ್ಯ ನಟನೆಯ 'ಒಂಟಿ’ ಚಿತ್ರದ ಟ್ರೇಲರ್, ಆಡಿಯೋ ರಿಲೀಸ್!

ಸಾಯಿರಾಂ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಆರ್ಯ ನಟಿಸಿ ನಿರ್ಮಿಸಿರುವ ‘ಒಂಟಿ’ ಸಿನಿಮಾದ ಟ್ರೈಲರ್ ಹಾಗೂ ಧ್ವನಿಸುರುಳಿ ಬಿಡುಗಡೆಯಾಗಿದೆ. ಆರಡಿ HEIGHT ನಿಂತ್ರೆ FIGHT ಎಂಬ ಅಡಿಬರಹ...

ಬೆಂಗಳೂರು: ಸಾಯಿರಾಂ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಆರ್ಯ ನಟಿಸಿ ನಿರ್ಮಿಸಿರುವ ‘ಒಂಟಿ’ ಸಿನಿಮಾದ ಟ್ರೈಲರ್ ಹಾಗೂ ಧ್ವನಿಸುರುಳಿ ಬಿಡುಗಡೆಯಾಗಿದೆ.  ಆರಡಿ HEIGHT ನಿಂತ್ರೆ FIGHT ಎಂಬ ಅಡಿಬರಹ ಹೊಂದಿರುವ ಚಿತ್ರದ ಚಿತ್ರೀಕರಣವೂ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿದೆ.
ಈ ಹಿಂದೆ ಪ್ರಶಾಂತ್ ನಟನೆಯ 'ಒರಟ ಐ ಲವ್ ಯು’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶ್ರೀ ಒಂಟಿ ಸಿನಿಮಾ ನಿರ್ದೇಶಿಸಿದ್ದಾರೆ. ಇನ್ನು 'ಈ ಸಂಜೆ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಆರ್ಯ 'ಒಂಟಿ’ ಚಿತ್ರದ ಮೂಲಕ ನಿರ್ಮಾಪಕ ಕಮ್ ಹಿರೋ ಆಗಿ ಮಿಂಚಲು ರೆಡಿಯಾಗಿದ್ದಾರೆ. `ಮೈ ಆಟೋಗ್ರಾಫ್.  ‘ನಂ 73 ಶಾಂತಿ ನಿವಾಸ’ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಆರ್ಯನಿಗೆ ನಾಯಕನಾಗಿ ಇದು ಎರಡನೇ ಸಿನಿಮಾ. 
ಇನ್ನು ಆರ್ಯನಿಗೆ ನಾಯಕಿಯಾಗಿ ಮೇಘನಾ ರಾಜ್ ಜತೆಯಾಗಿದ್ದು, ಉಳಿದಂತೆ ದೇವರಾಜ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಮಜಾ ಟಾಕೀಸ್ ಪವನ್, ರವಿಶಂಕರ್, ನಿಶಾಂತ್, ರಾಜವರ್ಧನ್ ಮತ್ತಿತರರು ನಟಿಸಿದ್ದಾರೆ. ಮನೋಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳಿಗೆ ನಾಗೇಂದ್ರ ಪ್ರಸಾದ್, ಕೆ, ಕಲ್ಯಾಣ್ ಸಾಹಿತ್ಯವಿದ್ದು, ಸಿದ್ದಾರ್ಥ ಬಸ್ರೂರ್, ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಡಿದ್ದಾರೆ.  
ನಟ ನೀನಾಸಂ ಅಶ್ವತ್ಥ್ ಈವರೆಗೂ ಯಾವುದೇ ಚಿತ್ರದಲ್ಲಿ ಮಾಡದಂತಹ ಪಾತ್ರದಲ್ಲಿ ಮಿಂಚಿದ್ದಾರಂತೆ. ನಾಯಕ ನಟದ ಸಹೋದರನಾಗಿ ನಟಿಸಿದ್ದು, ಮಜಾ ಟಾಕೀಸ್ ಖ್ಯಾತಿಯ ಪವನ್ ನಾಯಕನ ಗೆಳೆಯನಾಗಿ ಅಭಿನಯಿಸಿದ್ದಾರಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT