ಶಿವಾಂಕ್ 
ಸಿನಿಮಾ ಸುದ್ದಿ

ಎಸ್. ರವೀಂದ್ರನಾಥ್ ಅವರ ಕಂಟ್ರಿಮೇಡ್ ಚಾರಿಗೆ ಶಿವಾಂಕ್ ಹೀರೋ

ರಮೇಶ್ ಅರವಿಂದ್ ಅಭಿನಯದ ನೂರನೇ ಸಿನಿಮಾ ಪುಷ್ಪಕ ವಿಮಾನನಕ್ಕೆ ನಿರ್ದೇಶನ ಮಾಡಿ ಹೆಸರುಗಳಿಸಿದವರು ಎಸ್. ರವೀಂದ್ರನಾಥ್ ಅವರ ಮುಂದಿನ ಸಿನಿಮಾ ಯಾವುದು ...

ರಮೇಶ್ ಅರವಿಂದ್ ಅಭಿನಯದ ನೂರನೇ ಸಿನಿಮಾ ಪುಷ್ಪಕ ವಿಮಾನನಕ್ಕೆ ನಿರ್ದೇಶನ ಮಾಡಿ ಹೆಸರುಗಳಿಸಿದವರು ಎಸ್. ರವೀಂದ್ರನಾಥ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಇತ್ತೀಚೆಗಷ್ಟೇ ಬ್ರೇಕ್ ಹಾಕಿದ್ದರು.
ಕಂಟ್ರಿಮೇಡ್ ಚಾರಿ ಎನ್ನುವ ಗ್ಯಾಂಗ್ ಸ್ಟರ್ ಸಿನಿಮಾಗೆ ಅವರು ಚಾಲನೆ ನೀಡಿದ್ದರು. ಇದೀಗ ಆ ಚಿತ್ರದ ಹೀರೋ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ರಣವಿಕ್ರಮ ಪುಷ್ಪಕ ವಿಮಾನ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಗಮನಸೆಳೆದಿದ್ದ ನಟ ಶಿವಾಂಕ್ ಕಂಟ್ರಿಮೇಡ್ ಚಾರಿಗೆ ಹೀರೋ ಆಗಿದ್ದಾರೆ. 
1996ರಲ್ಲಿ 23-24ರ ಹರೆಯದ ಹುಡುಗರ ಮನಸ್ಥಿತಿ ಹೇಗಿತ್ತು ಎಂಬುದನ್ನು ಶಿವಾಂಕ್ ಪಾತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಿದ್ದಾರಂತೆ ನಿರ್ದೇಶಕರು. ಬದುಕಿನ ಬಗ್ಗೆ ಗಂಭೀರತೆ ಇಲ್ಲದ ಆ ವಯಸ್ಸಿನ ಹುಡುಗರು ಹೇಗೆಲ್ಲ ಇರುತ್ತಾರೆ? ಯಾವುದೆ ಗುರಿ ಇಟ್ಟುಕೊಳ್ಳದೆ ದುಡ್ಡಿಗಾಗಿ ಏನೆಲ್ಲ ಮಾಡುತ್ತಾರೆ ಎಂಬುದನ್ನು ಶಿವಾಂಕ್ ಪಾತ್ರ ಹೇಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್