ಚಿರಂತನ್-ಜಗಪತಿ ಬಾಬು 
ಸಿನಿಮಾ ಸುದ್ದಿ

ಮತ್ತೆ ಕನ್ನಡಕ್ಕೆ ತೆಲುಗು ನಟ ಜಗಪತಿ ಬಾಬು?

ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ತೆಲುಗಿನ ಜಗಪತಿ ಬಾಬು ಅಭಿನಯಿಸುತ್ತಿದ್ದು ಇದೀಗ ವಾರ್ ಅಂಡ್ ಪೀಸ್ ಚಿತ್ರಕ್ಕೆ ಅವರನ್ನು ಕರೆತರಲು ನವ ನಿರ್ದೇಶಕ ಪ್ರಖ್ಯಾತ್ ಗೌಡ ಮುಂದಾಗಿದ್ದಾರೆ.

ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ತೆಲುಗಿನ ಜಗಪತಿ ಬಾಬು ಅಭಿನಯಿಸುತ್ತಿದ್ದು ಇದೀಗ ವಾರ್ ಅಂಡ್ ಪೀಸ್ ಚಿತ್ರಕ್ಕೆ ಅವರನ್ನು ಕರೆತರಲು ನವ ನಿರ್ದೇಶಕ ಪ್ರಖ್ಯಾತ್ ಗೌಡ ಮುಂದಾಗಿದ್ದಾರೆ.
ವಾರ್ ಅಂಡ್ ಪೀಸ್ ಬಾಕ್ಸಿಂಗ್ ಮತ್ತು ಮಾರ್ಷಲ್ ಆರ್ಟ್ಸ್ ಕುರಿತಾದ ಚಿತ್ರಕಥೆಯನ್ನು ಹೊಂದಿದ್ದು ಈ ಹಿನ್ನೆಲೆಯಲ್ಲಿ ಕೋಚ್ ಪಾತ್ರಕ್ಕೆ ಜಗಪತಿ ಬಾಬುರನ್ನು ಕರೆತರಲು ಚಿತ್ರತಂಡ ನಿರ್ಧರಿಸಿದೆ. 
ಅದಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು ಎರಡನೇ ಹಂತದ ಚಿತ್ರೀಕರಣಕ್ಕೆ ಜಗಪತಿ ಬಾಬುರನ್ನು ಕರೆಸಿ ಅವರಿಂದ ಕೋಚ್ ಪಾತ್ರವನ್ನು ಮಾಡಿಸಬೇಕೆಂಬ ಆಸೆಯನ್ನು ಹೊಂದಿರುವುದಾಗಿ ನಿರ್ದೇಶಕ ಪ್ರಖ್ಯಾತ್ ತಿಳಿಸಿದ್ದಾರೆ.
ಜಗಪತಿ ಬಾಬು ಅವರ ಜೊತೆ ಚಿತ್ರತಂಡ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನು ಈ ಪಾತ್ರಕ್ಕೆ ಜಗಪತಿ ಬಾಬು ಅವರ ಸೂಕ್ತ ಆಯ್ಕೆ ಎಂಬುದು ನಿರ್ದೇಶಕರ ಮಾತು. ವಾರ್ ಅಂಡ್ ಪೀಸ್ ಚಿತ್ರವನ್ನು ಸಂತೋಷ ಕುಮಾರ್ ನಿರ್ಮಿಸುತ್ತಿದ್ದಾರೆ. ನವ ನಟ ಚಿರಂತನ್ ಹಾಗೂ ರಾಣಿ ವಾರದ್ ಮತ್ತು ಅನಘ ನಟಿಯರಾಗಿ ಅಭಿನಯಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!