ಸಿನಿಮಾ ಸುದ್ದಿ

ತೃತೀಯಲಿಂಗಿಯೊಬ್ಬನ ಭೂಗತಲೋಕದ ಚರಿತ್ರೆಯೇ ಹಫ್ತಾ!

Shilpa D
ಪ್ರಕಾಶ್‌ ಹೆಬ್ಬಾಳ  ಚೊಚ್ಚಲ ನಿರ್ದೇಶನದ ಚಿತ್ರ 'ಹಫ್ತಾ' ಇದೇ ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಶಾರ್ಪ್‌ ಶೂಟರ್ಸ್‌ ಕಥೆ ಹೇಳುವುದರ ಜತೆ ಅವರ ಲವ್‌ ಸ್ಟೋರಿಯೂ ಇರುವ ಈ ಸಿನಿಮಾ ಇಡೀ ಕುಟುಂಬ ನೋಡಬಹುದಾದ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. 
ಮೈತ್ರಿ ಪ್ರೊಡಕ್ಷನ್‌ ಮೂಲಕ ಮೈತ್ರಿ ಮಂಜುನಾಥ್‌ ಮತ್ತು ಬಾಲರಾಜ್‌ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.  ತೃತೀಯ ಲಿಂಗಿ ಪಾತ್ರದಲ್ಲಿ ವರ್ಧನ್ ನಟಿಸಿದ್ದಾರೆ. ಹಫ್ತಾದ  ಆತ್ಮ,  ಇದರಲ್ಲಿ ಡಬಲ್ ರೋಲ್ ನಲ್ಲಿ ಅಭಿನಯಿಸಿದ್ದಾರೆ. 
ಭೂಗತ ಜಗತ್ತಿನೊಳಗೆ ಇರುವ ಒಂದು ಕಂಟೆಂಟ್‌ ಈ ಸಿನಿಮಾದ ಕಥೆಯಾಗಿದೆ, ಮಾಮೂಲಿ ನೆಗೆಟಿವ್‌ ರೋಲ್‌ಗೂ ಈ ಚಿತ್ರದ ರೋಲ್‌ಗೂ ಬಹಳ ವ್ಯತ್ಯಾಸ ಇದೆ. ರಾಘವ್ ನಾಗ್ ಮತ್ತು ಬಿಂಬಶ್ರೀ ಮತ್ತು ಭರತ ನಾಟ್ಯ ನೃತ್ಯಗಾರ್ತಿ ಸೌಮ್ಯ ಕಾಲ್ ಗರ್ಲ್ ಪಾತ್ರದಲ್ಲಿ ನಟಿಸಿದ್ದಾರೆ. 
SCROLL FOR NEXT