ಸಿನಿಮಾ ಸುದ್ದಿ

ಸಮಂತಾಗೆ ಮದುವೆ ಬಗ್ಗೆ ಜಿಗುಪ್ಸೆ ಬಂತಾ? ನಾನು ಮದುವೆಯಾಗಿದ್ದೇ ತಪ್ಪಾಯ್ತಾ ಅಂತ ಹೇಳಿದ್ದೇಕೆ?

Vishwanath S
ಟಾಲಿವುಡ್ ನಲ್ಲಿ ಸ್ಟಾರ್ ನಟರೊಂದಿಗೆ ಅಭಿನಯಿಸಿ ಯಶಸ್ವಿ ಚಿತ್ರಗಳನ್ನು ನೀಡಿರುವ ನಟಿ ಸಮಂತಾ ಇದೀಗ ತಾವು ಮದುವೆಯಾಗಿದ್ದೇ ತಪ್ಪಾಯ್ತಾ ಎಂದು ಸಿಡಿಮಿಡಿಗೊಂಡಿದ್ದಾರೆ.
ಇದಕ್ಕೆ ಕಾರಣ ತಾವು ಮದುವೆಯಾದ ಬಳಿಕ ತಮಗೆ ಸಿನಿಮಾ ಅವಕಾಶಗಳು ಬರುತ್ತಿಲ್ಲ ಎಂಬುದೇ ಸಮಂತಾ ಕೋಪಕ್ಕೆ ಕಾರಣವಾಗಿದೆ. ಹೌದು 2017ರಲ್ಲಿ ಸಮಂತಾ ಟಾಲಿವುಡ್ ನಟ ನಾಗಚೈತನ್ಯ ಅವರನ್ನು ವಿವಾಹವಾಗಿದ್ದರು. 
ಮದುವೆ ಬಳಿಕ ಸಮಂತಾಗೆ ಚಿತ್ರಗಳ ಆಫರ್ ಕಡಿಮೆಯಾಗಿದೆಯಂತೆ. ಮದುವೆಗೂ ಮುನ್ನ ನನಗೆ ಸಾಕಷ್ಟು ಆಫರ್ ಗಳು ಬರುತ್ತಿದ್ದವು. ಆದರೆ ಮದುವೆ ಬಳಿಕ ಆಫರ್ ಗಳ ಸಂಖ್ಯೆ ಕಡಿಮೆಯಾಗಿದೆ. ಇನ್ನು ನಿರ್ಮಾಪಕರು ನನ್ನನ್ನು ಸಿನಿಮಾಗಳಲ್ಲಿ ಹಾಕಿಕೊಂಡು ಮಾಡುವುದೇನಿದೆ ಎನ್ನುವ ಭಾವನೆಯಲ್ಲಿದ್ದಾರೆ ಎಂದು ಸಮಂತಾ ಬೇಸರ ವ್ಯಕ್ತಪಡಿಸಿದ್ದಾರೆ.
SCROLL FOR NEXT