ಸಿನಿಮಾ ಸುದ್ದಿ

ಮತ್ತೆ ಪ್ರೇಕ್ಷಕರನ್ನು ನಕ್ಕು ನಲಿಸಲು ತಯಾರಾದ ಶರಣ್: ಆಗಸ್ಟ್ ಗೆ ತೆರೆಮೇಲೆ 'ಅಧ್ಯಕ್ಷ ಇನ್ ಅಮೆರಿಕಾ'

Raghavendra Adiga
"ಅಧ್ಯಕ್ಷ ಇನ್ ಅಮೆರಿಕಾ" ಚಿತ್ರದ ಮುಕ್ಕಾಲು ಪಾಲು ಚಿತ್ರೀಕರಣ ಅಮೆರಿಕಾದಲ್ಲೇ ನಡೆದಿದ್ದು ಈ ಚಿತ್ರದ ಶೂಟಿಂಗ್ ನಿಜಕ್ಕೂ ಸವಾಲಿನದಾಗಿತ್ತು ಎಂದು ಸಂಭಾಷಣಾ ಗಾರರಾಗಿ ನಿರ್ದೇಶಕ ಸ್ಥಾನಕ್ಕೇರಿದ ಯೋಗಾನಂದ್ ಮುದ್ದಾನ್ ಹೇಳಿದ್ದಾರೆ.ಚಿತ್ರೀಕರಣ ತುಸು ವಿಳಂಬವಾಗಿದ್ದ ಕಾರಣ ತನಗೆ ವೀಸಾ ಸಮಸ್ಯೆಯಾಗಿತ್ತು ಎಂದು ನಿರ್ದೇಶಕರು ಹೇಳಿದ್ದಾರೆ.
"ಅಮೆರಿಕಾದಲ್ಲಿ 37 ದಿನಗಳ ಸುದೀರ್ಘ ಶೂಟಿಂಗ್ ನಡೆಸಲು ನಾವು ಚಿತ್ರತಂಡದ ಎಲ್ಲಾ  ಕಲಾವಿದರು ಮತ್ತು ತಂತ್ರಜ್ಞರ ದಿನಾಂಕಗಳನ್ನು ಹೊಂದಿಸಬೇಕಾಗಿತ್ತು" ಎಂದು ನಿರ್ದೇಶಕರು ಹೇಳಿದರು,ಶರಣ್, ರಾಗಿಣಿ ದ್ವಿವೇದಿ ಅಭಿನಯದ ಚಿತ್ರವೀಗ ಡಿಟಿಎಸ್ ಹಂತದಲ್ಲಿದೆ. "ನಾವು ಶೀಘ್ರದಲ್ಲೇ ಅಂತಿಮ ಪ್ರತಿಯನ್ನು ಹೊರತರಲು ಯೋಜಿಸಿದ್ದೇವೆ.ಏಕಕಾಲದಲ್ಲಿ ಆಡಿಯೊ ಬಿಡುಗಡೆಗಾಗಿ ಸಜ್ಜಾಗುತ್ತಿದ್ದೇವೆ" ಎಂದು ಯೋಗಾನಂದ್ ಹೇಳುತ್ತಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ "ಅಧ್ಯಕ್ಷ ಇನ್ ಅಮೇರಿಕಾ" ಚಿತ್ರಕ್ಕೆ  ಎನ್ಆರ್ಐ ಹೂಡಿಕೆದಾರ, ಟಿ ಜಿ ವಿಶ್ವಪ್ರಸಾದ್ ಹ್ಗೂ ವಿವೇಕ್ ಕುಚ್ಚಿಬೋಟ್ಲಾ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
"ಬಿಗ್ ಬಜೆಟ್ ಸಿನಿಮಾಗಳ ಬಗೆಗೆ ನಮಗೆ ಅರಿವಿದೆ. ಆದರೆ ಇದು ಸಂಪೋರ್ಣ ವಿಭಿನ್ನ.ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ನಾವು ಆಗಸ್ಟ್ ನಲ್ಲಿ ತೆರೆಗೆ ತರಲು ಸಿದ್ದವಾಗಿದ್ದೇವೆ." ಅವರು ಹೇಳಿದ್ದಾರೆ. ಈ ಚಿತ್ರದ ಮೂಲಕ ಶರಣ್-ರಾಗಿಣಿ ಮೊಟ್ಟ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶರಣ್ ಚಿತ್ರಕ್ಕಾಗಿ ವಿ ಹರಿರಿಕೃಷ್ಣ ಸಂಗೀತವನ್ನು ನೀಡಿದ್ದು ಸಹ ಇದೇ ಮೊದಲಾಗಿದೆ.ಲು. ಚಿತ್ರದ ಕ್ಯಾಮೆರಾ ಕೆಲಸವನ್ನು ಸುಧಾಕರ್ ಎಸ್ ರಾಜ್, ಸಿದ್ಧಾರ್ಥ್ ರಾಮಸ್ವಾಮಿ ಮತ್ತು ಅನೀಶ್ ತರುಣ್ ಕುಮಾರ್ ಎಂಬ ಮೂರು ಡಿಒಪಿಗಳು ನಿರ್ವಹಿಸಿದ್ದಾರೆ. ಕಲಾ ವಿಭಾಗವನ್ನು ರವಿ ಸಂತೇ ಹೈಕ್ಳು ಮತ್ತು ಮೋಹನ್ ಬಿ ಕೆರೆ ನಿರ್ವಹಿಸಿದ್ದಾರೆ. ಪ್ರಕಾಶ್ ಬೆಳವಾಡಿ ಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಲನಚಿತ್ರ ತಾರಾಗಣದಲ್ಲಿ ದಿಶಾ ಪಾಂಡೆ, ಸಾಧು ಕೋಕಿಲಾ, ಮಕರಂದ್ ದೇಶಪಾಂಡೆ, ರಂಗಾಯಣ ರಘು ಇತರ ನಟರು ಇದ್ದಾರೆ.
SCROLL FOR NEXT