ವೈಜಿಎಫ್ ಚಾಪ್ಟರ್-2: ಮಗಳ ನಾಮಕರಣದ ಬೆನ್ನಲ್ಲೇ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಯಶ್ ದಂಪತಿ!
ಮಗಳ ನಾಮಕರಣದ ಬೆನ್ನಲ್ಲೇ ನಟ ಯಶ್ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಮಗಳ ನಾಮಕರಣದ ಬೆನ್ನಲ್ಲೇ ನಟ ಯಶ್ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಮೊದಲ ಮಗು ನಿರೀಕ್ಷೆಯಲ್ಲಿದ್ದಾಗ ಬಳಸಿದ್ದ ವೈಜಿಎಫ್ ಪದವನ್ನು ಯಶ್ ಈಗ ಮತ್ತೊಮ್ಮೆ ಬಳಸಿದ್ದು, ವೈಜಿಎಫ್ ಚಾಪ್ಟರ್-2 ''ಮತ್ತೊಂದು ಸಿಹಿ ಸುದ್ದಿ, ನಿಮ್ಮೆಲ್ಲರ ಪ್ರೀತಿ, ಹಾರೈಕೆ ನಮ್ಮ ಕುಟುಂಬದ ಮೇಲಿರಲಿ'' ಎಂದು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಯಶ್, ಮಗಳ ಮೂಲಕವೇ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.
ಆಯ್ರಾ ಫೋಟೋ ಜೊತೆಗೆ “ಎಲ್ಲರಿಗೂ ಹಾಯ್. .. ನಮ್ಮ ಮನೆಗೆ ಇನ್ನೊಂದು ಪುಟ್ಟ ಪಾಪು ಬರುತ್ತಿದೆ. ಇದೇನು ಇಷ್ಟು ಬೇಗ ಅಂತೀರಾ? ಈ ಸುದ್ದಿಯನ್ನು ನೀವು ನಂಬ್ತೀರೋ, ಬಿಡ್ತೀರೋ.. ಆದರೆ ನಾನು ನನ್ನ ಆಟಿಕೆಗಳನ್ನು ಅದರ ಜೊತೆ ಶೇರ್ ಮಾಡಿಕೊಳ್ಳಬೇಕಾಗುತ್ತದೆ. ನಮ್ಮಪ್ಪ ತುಂಬಾ ಸ್ಪೀಡ್. ಸುದ್ದಿ ಶೇರ್ ಮಾಡೋಕೆ ನಾನೇ ತಡ ಮಾಡಿದ್ದೀನಿ” ಎಂದು ಮಗಳು ಹೇಳಿದಂತೆ ಬರೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ ರಾಧಿಕಾ ಪಂಡಿತ್ ಈಗ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಯಶ್ ಅವರ ಈ ಪೋಸ್ಟ್ ಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.