ಬರ್ತಿದೆ ಗೂಗ್ಲಿ-2 ಹಿರೋ ಯಾರು, ಕಥೆ ಏನು ಗೊತ್ತೇ?
ಪವನ್ ಒಡೆಯರ್ ನಿರ್ದೇಶನದ ಗೂಗ್ಲಿ ಚಿತ್ರ ಕನ್ನಡ ಚಿತ್ರರಂಗದಲ್ಲಿ ವಿನೂತನ ಪ್ರಯೋಗಾತ್ಮಕ ಚಿತ್ರವಾಗಿತ್ತು. ಈಗ ಅದೇ ಟೈಟಲ್ ನ್ನು ಹೊತ್ತು ಮತ್ತೊಂದು ಚಿತ್ರ ಕನ್ನಡಿಗರೆದುರು ಬರಲು ಸಿದ್ಧವಾಗಿದೆ.
ಪವನ್ ಒಡೆಯರ್ ಗೆ ಸಹಾಯಕ ನಿರ್ದೇಶಕರಾಗಿದ್ದ ರಜಗುರು ಬಿ ಅವರು ಗೂಗ್ಲಿ-2 ಸಿನಿಮಾ ನಿರ್ದೇಶಿಸುತ್ತಿದ್ದು, ಹೆಸರಾಂತ ಸಂಗೀತಗಾರ ಜಿಕೆ ವೆಂಕಟೇಶ್ ಮೊಮ್ಮಗ ಪೃಥ್ವಿ ನಾಯಕನಟನಾಗಿ ಅಭಿನಯಿಸುತ್ತಿದ್ದಾನೆ.
2016 ರಲ್ಲಿ ನಾನು ಮತ್ತು ವರಲಕ್ಷ್ಮಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾಗಿದ್ದ ಪೃಥ್ವಿ ಅವರ ಎರಡನೇ ಸಿನಿಮಾ ಆಗಲಿರುವ ಗೂಗ್ಲಿ-2 ಚಿತ್ರೀಕರಾಣ ಏಪ್ರಿಲ್ ನಿಂದ ಪ್ರಾರಂಭವಾಗಲಿದೆ.
ಸಿಟಿ ಎಕ್ಸ್ ಪ್ರೆಸ್ ಗೆ ಸಿನಿಮಾ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ, ಈ ಸಿನಿಮಾ ಗೂಗ್ಲಿಯ ಮುಂದುವರೆದ ಭಾಗವಲ್ಲ, ಈ ಸಿನಿಮಾವನ್ನು ಗೂಗ್ಲಿಗೆ ಹೋಲಿಕೆ ಮಾಡುವುದಕ್ಕೂ ಸಾಧ್ಯವಿಲ್ಲ. ಹೊಂದಿಕೆಯಾಗದ ಜೋಡಿಗಳ ಪ್ರೇಮ ಕಥೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಮಂಜುನಾಥ್ ಗೂಗ್ಲಿ-2 ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅರುಣ್ ಸೋಮಸುಂದರಮ್ ಛಾಯಾಗ್ರಾಹಕರಾಗಿರಲಿದ್ದಾರೆ. ನಟಸಾರ್ವಭೌಮ ಚಿತ್ರದ ನಾಯಕಿ ಅನುಪಮ ಪರಮೇಶ್ವರನ್ ಅವರನ್ನು ನಾಯಕಿಯ ಪಾತ್ರದಲ್ಲಿ ನಟಿಸುವಂತೆ ಕೇಳಲಾಗಿದೆ. ಗೂಗ್ಲಿ-1 ರಲ್ಲಿ ನಾಯಕಿಯ ಪಾತ್ರದಲ್ಲಿದ್ದ ಕೃತಿ ಕರಬಂಧ ಅವರು ಗೂಗ್ಲಿ-2 ಚಿತ್ರದಲ್ಲಿ ವಿಶೇಷ ಪಾತ್ರ ವಹಿಸಲಿದ್ದಾರಂತೆ.