ಆಕಾಂಕ್ಷಾ ಸಿಂಗ್ 
ಸಿನಿಮಾ ಸುದ್ದಿ

'ಪೈಲ್ವಾನ್' ನಲ್ಲಿ ಮಹಿಳಾ ಖದರ್ ಸಹ ಇದೆ: ಆಕಾಂಕ್ಷಾ ಸಿಂಗ್

ನಿರ್ದೇಶಕ ಕೃಷ್ಣ ಪೈಲ್ವಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ, ಇದು ಸುದೀಪ್ ಮತ್ತು ಆಕಂಕ್ಷಾ ಸಿಂಗ್ ಜೊಡಿಯ ಚಿತ್ರವಾಗಿದ್ದು ಆಕಾಂಕ್ಷಾ ಈ ಚಿತ್ರದಲ್ಲಿನ ಅಭಿನಯದ ಕುರಿತಾದ ನನ್ನ ಅನುಭವ....

ಬೆಂಗಳೂರು: ನಿರ್ದೇಶಕ ಕೃಷ್ಣ ಪೈಲ್ವಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ, ಇದು ಸುದೀಪ್ ಮತ್ತು ಆಕಂಕ್ಷಾ ಸಿಂಗ್ ಜೊಡಿಯ ಚಿತ್ರವಾಗಿದ್ದು ಆಕಾಂಕ್ಷಾ ಈ ಚಿತ್ರದಲ್ಲಿನ ಅಭಿನಯದ ಕುರಿತಾದ ನನ್ನ ಅನುಭವ ಇದುವರೆಗಿನ ನನ್ನ ಜೀವನದಲ್ಲೇ ವಿಶೇಷವಾಗಿತ್ತು ಎಂದು ಹೇಳಿದ್ದಾರೆ. ಶುಕ್ರವಾರ ಮಹಿಳಾ ದಿನದ ವಿಶೇಷ ಘಳಿಗೆಯಲ್ಲಿ ಅವರು ಚಿತ್ರದಲ್ಲಿನ ನಟನೆ ಕುರಿತು ಸಾಮಾಜಿಕ ತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದೇ ವೇಳೆ ಆಕಾಂಕ್ಷಾ ಅವರ ಈ ಚಿತ್ರದಲ್ಲಿನ ಮೊದಲ ಕೆಲವು ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ಅದರಲ್ಲಿ ನಟಿ ಎರಡು ಶೇಡ್ ಗಳಲ್ಲಿರುವುದು ಕಾಣಬಹುದಾಗಿದೆ.
"ಈ ಚಿತ್ರವು ಮಹಿಳೆಯಿಂದ ನಿರ್ದೇಶಿಸಲ್ಪಟ್ಟಿದೆ. ಸ್ವಪ್ನಾ ಕೃಷ್ಣ ಇದರ ಪ್ರಮುಖ ನಿರ್ದೇಶಕಿ, ನಾನಿದರಲ್ಲಿ ನಾಯಕಿಯಾಗಿದ್ದೇನೆ.ಮಹಿಳೆಯರಿಗೆ ಹೆಚ್ಚಿನ ಶಕ್ತಿ,ಇದೆ" ಆಕಾಂಕ್ಷಾ ಕಳೆದ ಮೇ ನಿಂದ ಸುಮಾರು ಒಂಬತ್ತು ತಿಂಗಳಿನಿಂದ ಚಿತ್ರೀಕರಣದಲ್ಲಿದ್ದು ಸೆಟ್ ನಲ್ಲಿ ಅವರೊಬ್ಬರೇ ಮಹಿಳೆಯಾಗಿದ್ದರೆನ್ನುವುದು ವಿಶೇಷ.
"ಸ್ವಪ್ನಾ ಯಾವಾಗಲೂ ಫೋನ್ ಕರೆಯಲ್ಲಿದ್ದ ಕಾರಣ ಸೆಟ್ ನಲ್ಲಿ ನಾನು ಏಕಾಂಗಿ ಎಂದೆನಿಸಿಲ್ಲ.ನಾನು ಎಂದಿಗೂ ಬೇರೆಯವಳೆನಿಸದಂತೆ ಚಿತ್ರತಂಡದ ಎಲ್ಲಾ ಸದಸ್ಯರೂ ನಡೆದುಕೊಂಡಿದ್ದಾರೆ. ನನ್ನ ಮೇಲೆ ವಿಶ್ವಾಸ ತೋರಿದ್ದಾರೆ"
 "ನನ್ನ ಪಾತ್ರಕ್ಕೆ ಸಮರ್ಪಕ  ಪ್ರಾಮುಖ್ಯತೆಯನ್ನು ನಿಡಲಾಗಿದೆ.ನಿರ್ದೇಶಕರು ನನ್ನನ್ನು ಚೆನ್ನಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದು ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ಯಶಸ್ವಿ ವೇದಿಕೆಯಾಗಿದೆ. ಕೃಷ್ಣ ಈ ಚಿತ್ರ ನಿರ್ದೇಶಿಸಿದ್ದು ಇದರಲ್ಲಿ ನಾನು ಕಾಣಿಸಿಕೊಳ್ಳುತ್ತಿರುವುದು ನನ್ನ ಅದೃಷ್ಟ." ಎನ್ನುವ ನಟಿ ಚಿತ್ರದಲ್ಲಿನ ಅವರ ಪಾತ್ರದ ಕುರಿತು ಯಾವ ಗುಟ್ಟನ್ನೂ ಬಿಟ್ಟುಕೊಡಲಿಲ್ಲ.
ಇನ್ನು ಈ ಚಿತ್ರದಲ್ಲಿ ಹಲವಾರು ನಟರು ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುನೀಲ್ ಶೆಟ್ಟಿ ಮತ್ತು ಸುಶಾಂತ್ ಸಿಂಗ್ ಈ ಸಾಲಿನಲ್ಲಿದ್ದಾರೆ. ಅವರು ಕಬೀರ್ಹಾಗೂ ಶರತ್ ಲೋಹಿತಾಶ್ವ ಅವರೊಡನೆ ಕಾಣಿಸಿಕೊಳ್ಳುತ್ತಾರೆ.
ಚಿತ್ರ ಆರ್.ಆರ್.ಆರ್. ಮೋಹನ್  ಪಿಕ್ಚರ್ಸ್ ಅಡಿಯಲ್ಲಿ ತಯಾರಾಗಿದ್ದು ಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಪಂಜಾಬಿ, ಮರಾಠಿ, ಭೋಜಪುರಿ, ಹಾಗೂ ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT