ಬೆಂಗಳೂರು: ಪೈಲ್ವಾನ್ ಚಿತ್ರದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಮುಂದೆ ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ನಟಿಸಲಿದ್ದು ಇದು ಅವರ ಜೀವನದ ದುಬಾರಿ ಚಿತ್ರ ಎಂದು ಹೇಳಲಾಗುತ್ತಿದೆ.
ಹೌದು, ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು ಈ ಚಿತ್ರದ ಬಜೆಟ್ ಬರೋಬ್ಬರಿ 75 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಸುದೀಪ್ ಅವರ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.
ಸಾಹಸಮಯ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಬಾರೀ ಬಜೆಟ್ ಅವಶ್ಯಕ ಎನ್ನಲಾಗಿದೆ. ಒನ್ಸ್ ಅಪಾನ್ ಎ ಟೈಮ್ ಇನ್ 2209 ಎಡಿ ಎಂಬ ಟ್ಯಾಗ್ ಲೈನ್ ಇಡಲಾಗಿದ್ದು ಕ್ರಿ.ಶ 2209ರ ಕಾಲಘಟ್ಟದಲ್ಲಿ ಕಥೆ ಸಾಗಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಸುದೀಪ್ ಪೈಲ್ವಾನ್, ಕೋಟಿಗೊಬ್ಬ 3, ಸೈರಾ ನರಸಿಂಹ ರೆಡ್ಡಿ, ದಬಾಂಗ್ 3 ಚಿತ್ರಗಳಲ್ಲಿ ಬಿಜಿಯಾಗಿದ್ದು ಈ ಚಿತ್ರಗಳ ಬಳಿಕ ಬಿಲ್ಲ ರಂಗ ಬಾಷಾ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ತೊಡಗಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos