ಅಭಿಷೇಕ್ ಹಾಗೂ ತಾನ್ಯಾ ಹೋಪ್ 
ಸಿನಿಮಾ ಸುದ್ದಿ

'ಅಮರ್' ಗಾಗಿ ಪುನರ್ ರಚಿತವಾದ 'ಒಲವಿನ ಉಡುಗೊರೆ' ಹಾಡು, ನೋಡಲು ಥಿಯೇಟರ್‌ಗೇ ಹೋಗ್ಬೇಕು!

ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಾಯಕನಾಗಿರುವ "ಅಮರ್" ಚಿತ್ರದ ಚಿತ್ರೀಕರಣ ಇದಾಗಲೇ ಅಂತಿಮ ಹಂತಕ್ಕೆ ಬಂದಿದೆ. ಇದರ ನಡುವೆ "ಅಮರ್" ಚಿತ್ರದಲ್ಲಿ....

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಾಯಕನಾಗಿರುವ "ಅಮರ್" ಚಿತ್ರದ ಚಿತ್ರೀಕರಣ ಇದಾಗಲೇ ಅಂತಿಮ ಹಂತಕ್ಕೆ ಬಂದಿದೆ. ಇದರ ನಡುವೆ "ಅಮರ್" ಚಿತ್ರದಲ್ಲಿ ಅಂಬಿ ಅವರ ಜನಪ್ರಿಯ ಗೀತೆ "ಒಲವಿನ ಉಡುಗೊರೆ...."  ಹಾಡನ್ನು ಹೊಸ ರೂಪದಲ್ಲಿ ಸೃಷ್ಟಿಸಲಾಗಿದೆ. ಪ್ರೇಕ್ಷಕರು, ಅಂಬರೀಶ್ ಅಭಿಮಾನಿಗಳು ಈ ಹಾಡು ಕೇಳಲು, ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಕಾಯುವಿಕೆ ಇನ್ನಷ್ಟು ಕಾಲ ಮುಂದುವರಿಯುವುದು ಅನಿವಾರ್ಯವಾಗಲಿದೆ. ಕಾರಣ "ಒಲವಿನ..." ಮೂಲ ಹಾಡಿನ ಹಕ್ಕುದಾರರಾಗಿರುವ ಸಂಗೀತಾ ಆಡಿಯೋ ತಮ್ಮ ಹಾಡನ್ನು ಚಿತ್ರತಂಡ ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಾಗಲಿ, ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಾಗಲಿ ಬಳಸಿಕೊಳ್ಳಬಾರದು. ಏನಿದ್ದರೂ ಚಿತ್ರಮಂದಿರಗಳಲ್ಲಿ ಮಾತ್ರವೇ ಪ್ರದರ್ಶಿಸಬೇಕು ಎಂದು ಷರತ್ತು ಹಾಕಿದೆ. ಅಭಿಷೇಕ್ ಮತ್ತು ತಾನ್ಯಾ ಹೋಪ್ ಈ ನೂತನ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಚಿತ್ರದ ನಿರ್ದೇಶಕ ನಾಗಶೇಖರ್ ಇನ್ನು ಹತ್ತು ದಿನಗಳಲ್ಲಿ "ಅಮರ್" ಆಡಿಯೋ ಟ್ರಾಕ್ ಬಿಡುಗಡೆಗೆ ಸಜ್ಜಾಗಿದ್ದು ಅರ್ಜುನ್ ಜನ್ಯ ಸಂಗೀತವಿರುವ ಈ ಆಡಿಯೋ ಟ್ರಾಕ್ ಬಿಡ್ಗಡೆಗೆ ಮುನ್ನ ಸಂಗೀತಾ ಆಡಿಯೋ ಈ ಷರತ್ತು ಹಾಕಿದೆ. ಹೀಗಾಗಿ ಈಗ ಚಿತ್ರತಂಡ "ಒಲವಿನ ಉಡುಗೊರೆ..." ಈ ಹಾಡನ್ನು ಹೊರತಾಗಿ ಉಳಿದ ನಾಲ್ಕು ಹಾಡನ್ನಷ್ಟೇ ಆಲ್ಬಂ ನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ.
"ಅಮರ್" ಅಭಿಷೇಕ್ ಅವರ ಚೊಚ್ಚಲ ಚಿತ್ರವಾಗಿದ್ದು 2019ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದೆನಿಸಿದೆ. ಕರ್ನಾಟಕ ಹಾಗೂ ಸ್ವಿಡ್ಜರ್ ಲ್ಯಾಂಡ್ ನ ನಾನಾ ಕಡೆಗಳಲ್ಲಿ ಚಿತ್ರೀಕರಣ ಮಾಡಿರುವ ಈ ಚಿತ್ರದ ಟ್ರೇಲರ್ ಹಾಗೂ ಪೋಸ್ಟರ್ ಸಾಕಷ್ತು ಕುತೂಹಲಕಾರಿಯಾಗಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.ಸಂದೇಶ್ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರ ಏಪ್ರಿಲ್ ಅಂತ್ಯ ಇಲ್ಲವೇ ಮೇ ಮೊದಲ ವಾರ ತೆರೆಕಾಣುವ ನಿರೀಕ್ಷೆ ಇದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅಭಿಷೇಕ್ ಅವರ ಮೊದಲ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇನ್ನು ದೇವರಾಜ್, ಸಾಧು ಕೋಕಿಲಾ, ಚಿಕ್ಕಣ್ಣ, ಸಹ ತೆರೆ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್