ಬೆಂಗಳೂರು: ಇತ್ತೀಚೆಗಷ್ಟೆ ಖಾಸಗಿ ಹೋಟೆಲ್ ನಲ್ಲಿ ತಮ್ಮ ಇಬ್ಬರು ಬಾಯ್ ಫ್ರೆಂಡ್ಸ್ ಗಳ ನಡುವಿನ ಮಾರಾಮಾರಿ ಪ್ರಕರಣದಿಂದ ತೀವ್ರ ಬೇಸರವಾಗಿದೆ ಎಂದು ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.
ಹಳೆ ಬಾಯ್‌ಫ್ರೆಂಡ್ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಹೊಸ ಬಾಯ್‌ಫ್ರೆಂಡ್ ಸಾರಿಗೆ ಇಲಾಖೆ ಅಧಿಕಾರಿ ನಡುವೆ ನಗರದ ಪಂಚತಾರಾ ಹೋಟೆಲ್‌ನಲ್ಲಿ ಮಾರಾಮಾರಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ರಾಗಿಣಿ ಪ್ರತಿಕ್ರಿಯಿಸಿದ್ದು, ಶಿವಪ್ರಕಾಶ್ ಹಾಗೂ ರವಿ ನಡುವಿನ ಕಿತ್ತಾಟ ಬೇಸರ ತಂದಿದೆ. ನಾನು ಶೂಟಿಂಗ್ ನಲ್ಲಿದ್ದೇನೆ. ಈ ಘಟನೆಗೂ ನನಗೂ ಸಂಬಂಧವಿಲ್ಲ. ಇದು ಅವರಿಬ್ಬರ ನಡುವಿನ ವಿಚಾರ.
ಅನಗತ್ಯವಾಗಿ ನನ್ನನ್ನು ಈ ವಿಷಯದಲ್ಲಿ ಕರೆ ತರಬೇಡಿ. ನನ್ನ ಘನತೆ, ಗೌರವಕ್ಕೆ ಧಕ್ಕೆ ತಂದವರ ಹಾಗೂ ಮಾಧ್ಯಮಗಳಲ್ಲಿ ನನ್ನ ಭಾವಚಿತ್ರ ಹಾಕಿ ಇಲ್ಲಸಲ್ಲದ ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.