ಬೆಂಗಳೂರು: "ಅವತಾರ ಪುರುಷ" ಚಿತ್ರತಂಡ ಸಿನಿ ಪ್ರೇಕ್ಷಕರಿಗೆ ಹೊಸ ಬಗೆಯ ಮನರಂಜನೆ ಒದಗಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ. ನಟ ಶರಣ್ ಅಭಿನಯದ ಈ ಚಿತ್ರಕ್ಕೆ ಸುನಿ ನಿರ್ದೇಶನವಿದೆ ಪುಷ್ಕರ ಮಲ್ಲಿಕಾರ್ಜುನ್ ನಿರ್ಮಾಪಕರಾಗಿದ್ದು ಚಿತ್ರತಂಡ ಮಾರ್ಚ್ 16ರಿಂದ ಕೇರಳದಲ್ಲಿ ಬೀಡು ಬಿಟ್ಟಿದೆ.
ಪಾಲಕ್ಕಾಡ್ ಜಿಲ್ಲೆ ಒಳಪ್ಪಮನ್ನ ಎಂಬಲ್ಲಿ ದಟ್ಟ ಹಸಿರು ಹಾಗು ಪಾರಂಪರಿಕ ಸಂಸ್ಕೃತಿ ಇದ್ದು ಈ ಪ್ರದೇಶದಲ್ಲಿ ಶೂಟಿಂಗ್ ಗೆ ಅವಕಾಶ ಸಿಕ್ಕಿರುವುದು ತಮ್ಮ ಅದೃಷ್ಟವೆಂದು ಚಿತ್ರತಂಡ ಬಾವಿಸಿದೆ.
"ಈ ಪ್ರದೇಶ ನೂರು ಎಕರೆ ವಿಸ್ತೀರ್ಣವಾಗಿದ್ದು ಚಿತ್ರತಂಡ ಮುನ್ನೂರು ವರ್ಷಗಳ ಹಳೆಯ ಮನೆಯೊಂದರಲ್ಲಿ ಶೂಟಿಂಗ್ ನಡೆಸಿದೆ.ಈ ಮನೆಗೆ ತಾಕಿಕೊಂಡೇ ಕಲ್ಯಾಣಿ ಸಹ ಇದ್ದು ಇದಕ್ಕೆ ವಿಶೇಷ ಇತಿಹಾಸವಿದೆ. ಇದು ಮಲಯಾಳಿ ಚಿತ್ರರಂಗದ ಪಾಲಿಗೆ ಅದೃಷ್ಟದ ತಾಣವಾಗಿದೆ. ನಟ ಮೋಹನ್ ಲಾಲ್, ಮುಮ್ಮಟ್ಟಿ ಅಂತಹಾ ಹಿರಿಯ ನಟರು ತಮ್ಮ ಚಿತ್ರದ ಯಾವುದೇ ಒಂದು ಭಾಗವನ್ನಾದರೂ ಈ ಪ್ರದೇಶದಲ್ಲಿ ಚಿತ್ರೀಕರಿಸದೆ ಇರಲಾರರು.
"ಶರಣ್ ಈ ಚಿತ್ರದಲ್ಲಿ ಜ್ಯೂನಿಯರ್ ಕಲಾವಿದನಾಗಿ ಅಭಿನಯಿಸಿದ್ದಾರೆ. ಜತೆಗೆ ಚಿತ್ರದಲ್ಲಿ ಮಾಟ, ಮಂತ್ರವಿದ್ಯೆಗಳನ್ನು ಸಹ ತೋರಿಸಲಾಗಿದೆ. ಇದೇ ಕಾರಣಕ್ಕೆ ನಾವು ಇಂತಹಾ ಸ್ಥಳದಲ್ಲಿ ಶೂಟಿಂಗ್ ನಡೆಸಿದ್ದೇವೆ" ನಿರ್ಮಾಪಕ ಪುಷ್ಕರ್ ಹೇಳಿದ್ದಾರೆ.
ನಿರ್ಮಾಪಕರು ಚಿತ್ರದಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ಜೋಡಿಯ ಮೊದಲ ಕೆಲ ಚಿತ್ರಗಳನ್ನು ಪತ್ರಿಕೆ ಜತೆ ಹಂಚಿಕೊಂಡಿದ್ದಾರೆ.
"ಕರ್ನಾಟಕದ ಬಹುತೇಕ ಎಲ್ಲಾ ಪ್ರದೇಶಗಳನ್ನು ನೋಡಿದ ಬಳಿಕ ನಾವು ಹೊಸ ಬಗೆಯ ಅನುಭೂತಿ ಒದಗಿಸಲು ಕೇರಳದ ಈ ಭಾಗವನ್ನು ಆಯ್ಕೆ ಮಾಡಿಕೊಂಡೆವು.ಕನ್ನಡದ "ಆತೋಗ್ರಾಫ್" ಚಿತ್ರದಲ್ಲಿ ಈ ಮನೆ ಹೊರಭಾಗದಲ್ಲಿ ಚಿತ್ರಿತವಾಗಿರುವ ಒಂದು ದೃಶ್ಯವಿತ್ತು. ಅಲ್ಲಿಂದೀಚೆಗೆ ಯಾವುದೇ ಕನ್ನಡದ ಚಿತ್ರ ಈ ಲೊಕೇಷನ್ ನಲ್ಲಿ ಚಿತ್ರೀಕರಣವಾಗಿಲ್ಲ. ಇದೀಗ ನಮ್ಮ ತಂಡ ಇಲ್ಲಿ ಚಿತ್ರೀಕರಣದಲ್ಲಿದ್ದು ಚಿತ್ರದಲ್ಲಿ ನಿಜವಾಗಿ ಹೊಸ ಬಗೆಯ ದೃಶ್ಯಗಳು ಮೂಡಿಬರಲಿದೆ." ನಿರ್ಮಾಪಕರು ಹೇಳಿದ್ದಾರೆ. ಏಪ್ರಿಲ್ 5ರವ್ರೆಗೆ ಈ ಚಿತ್ರದ ಚಿತ್ರೀಕರಣ ಕೇರಳದಲ್ಲೇ ಮುಂದುವರಿಯಲಿದೆ.
ಸಂಗೀತ ನಿರ್ದೇಶಕ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದರೆ ವಿಲಿಯಂ ಡೇವಿಡ್ ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos