ರವಿಚಂದ್ರನ್ 
ಸಿನಿಮಾ ಸುದ್ದಿ

'ದಶರಥ'ನಿಗೆ ಕರಿ ಕೋಟಿನ ಕಂಟಕ

ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರು ಬಹಳ ವರ್ಷಗಳ ನಂತರ ಲಾಯರ್ ಆಗಿ ಕಾಣಿಸಿಕೊಂಡಿರುವ 'ದಶರಥ' ಚಿತ್ರದ ನಿರ್ಮಾಪಕರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ.

ಬೆಂಗಳೂರು: ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರು ಬಹಳ ವರ್ಷಗಳ ನಂತರ ಲಾಯರ್ ಆಗಿ ಕಾಣಿಸಿಕೊಂಡಿರುವ 'ದಶರಥ' ಚಿತ್ರದ ನಿರ್ಮಾಪಕರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ.
ದಶರಥ ಚಿತ್ರದ ಎರಡನೇಯ ಹಾಡಿನಲ್ಲಿ ಕರಿ ಕೋಟ್ ಹಾಕೋರೆಲ್ಲಾ ಕೇಸ್ ಗೆಲ್ಲೋದಿಲ್ಲ.... ಗೆದ್ದು ಬಿಗೋರೆಲ್ಲಾ ಹರಿಶ್ಚಂದ್ರರಲ್ಲ ಎಂಬ ಸಾಲಿಗೆ ಇಬ್ಬರು ವಕೀಲರಾದ ಗಾದಿ ಲಿಂಗಪ್ಪ ಮತ್ತು ಪರುಶುರಾಮ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಕರಿಕೋಟು ಹಾಕೋರೆಲ್ಲ ಕೇಸು ಗೆಲ್ಲೋದಿಲ್ಲ’ ಎಂಬ ಹಾಡನ್ನು ಚಿತ್ರದಿಂದ ತೆಗೆದುಹಾಕಲು ನಿರ್ದೇಶನ ನೀಡಬೇಕೆಂದು ವಕೀಲರಾದ ಗಾದಿಲಿಂಗಪ್ಪ ಅರ್ಜಿ ಸಲ್ಲಿಸಿದ್ದಾರೆ.
ದಶರಥ ಚಿತ್ರ ಏಪ್ರಿಲ್ 5ರಂದು ತೆರೆ ಕಾಣುತ್ತಿದ್ದು, ಚಿತ್ರ ಬಿಡುಗಡೆಗೂ ಮುನ್ನ ವಿವಾದ ಇತ್ಯರ್ಥಪಡಿಸಲು ನಾವು ಮಾರ್ಚ್ 22ರಂದು ಪ್ರಯತ್ನಿಸುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ ಎಂಎಸ್ ರಮೇಶ್ ಅವರು ಹೇಳಿದ್ದಾರೆ.
ಕರಿಕೋಟು ಹಾಕೋರೆಲ್ಲ ಕೇಸು ಗೆಲ್ಲೋದಿಲ್ಲ.... ಸಾಲು ತೆಗೆಯಲು ನಿರ್ದೇಶಕರು ಸಿದ್ಧರಿಲ್ಲ. ಆದರೆ ಈ ಹಾಡಿನಲ್ಲಿ ನ್ಯಾಯಾಲಯಗಳ ಘನತೆಗೆ ಧಕ್ಕೆಯಾಗುವ ಪದ ಬಳಸಲಾಗಿದೆ ಎಂದು ವಕೀಲರು ವಾದಿಸುತ್ತಿದ್ದಾರೆ.
ವಿ. ಮನೋಹರ್ ಅವರು ಬರೆದಿರುವ ಈ ಹಾಡನ್ನು ಗುರುಕಿರಣ್, ಪೀಚಳ್ಳಿ ಶ್ರೀನಿವಾಸ್ ಮತ್ತು ದೊಡ್ಡಪ್ಪ ಹಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್