ಸಿನಿಮಾ ಸುದ್ದಿ

ಭಾರತದದಲ್ಲಿ 200 ಕೋಟಿಗೂ ಹೆಚ್ಚು, ಒಟ್ಟಾರೆ 8,381 ಕೋಟಿ ಗಳಿಸಿದ ಅವೆಂಜರ್ಸ್; ಎಂಡ್ ಗೇಮ್

Srinivas Rao BV
ಹಾಲಿವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಆವೆಂಜರ್ಸ್ ಎಂಡ್ ಗೇಮ್ ಭಾರತದ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಗಳಿಕೆ ಕಂಡಿದೆ. 
5 ದಿನಗಳಲ್ಲಿ ಅವೆಂಜರ್ಸ್ ಎಂಡ್ ಗೇಮ್ ಚಿತ್ರ ಭಾರತದಲ್ಲಿ 200 ಕೋಟಿ ರೂಪಾಯಿಗಳನ್ನು ಗಳಿಸಿದೆ. ತರಣ್ ಆದರ್ಶ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರೆಗೂ 256 ಕೋಟಿ ರೂಪಾಯಿ ಗಳಿಸಿದ್ದು 400 ಕೋಟಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಹೇಳಿದ್ದಾರೆ. 
ಇನ್ನು ವಿಶ್ವಾದ್ಯಂತ ಒಟ್ಟಾರೆ 8,381 ಕೋಟಿ ರೂಪಾಯಿ ಗಳಿಸುವ ಮೂಲಕ ಅವೆಂಜರ್ಸ್ ಎಂಡ್ ಗೇಮ್ ಹೊಸ ದಾಖಲೆ ನಿರ್ಮಿಸಿದೆ.
SCROLL FOR NEXT