ಸಿನಿಮಾ ಸುದ್ದಿ

ಬಿಡುಗಡೆಗೂ ಮುನ್ನವೇ ಪ್ರಶಸ್ತಿ ಬಾಚಿಕೊಂಡ 'ಭಿನ್ನ' ಸಿನಿಮಾ

Shilpa D
ಆದರ್ಶ್ ಈಶ್ವರಪ್ಪ ಅವರ ಭಿನ್ನ ಸಿನಿಮಾದ ಉತ್ತಮ ಚಿತ್ರಕಥೆಗೆ 9ನೇ ದಾದಾ ಸಾಹೇಬ್ ಫಾಲ್ಕೆ ಎಕ್ಸ್ ಲೆನ್ಸ್ ಪ್ರಶಸ್ತಿ ದೊರಕಿದೆ. 
ಈ ಪ್ರಶಸ್ತಿಗಾಗಿ ಸುಮಾರು 700 ಸಿನಿಮಾಗಳು ಬಂದಿದ್ದವು,  ಕೊನೆಯ 7 ದೇಶಗಳ ವಿವಿಧ ಸಿನಿಮಾಗಳ ಪೈಕಿ ಭಿನ್ನ ಆಯ್ಕೆಯಾಗಿದೆ, ಅದರಲ್ಲಿ ಸಣ್ಣಕಥೆಗಳು ಕೂಡ ಸೇರಿಕೊಂಡಿವೆ.
ಈ ಸಿನಿಮಾದಲ್ಲಿ ಯಾವುದೇ ಸ್ಟಾರ್ ಪವರ್ ಇಲ್ಲ, ಬಾಯಿಂದ ಬಾಯಿ ಪ್ರಚಾರ ಪಡೆದುಕೊಂಡು ಜನಪ್ರಿಯವಾಗಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಿನಿಮಾ ಗುರುತಿಸಿಕೊಂಡಿರುವುದು,ನಮಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಪರ್ಪಲ್ ರಾಕ್ ಎಂಟರ್ಟೈನರ್ ಅವರ ಮೊದಲ ಸಿನಿಮಾ ಇದಾಗಿದೆ, ಈ ಸಿನಿಮಾವನ್ನು ನಿರ್ದೇಶಕ ಆದರ್ಶ್ ಪುಟ್ಟಣ್ಣ ಕಣಗಾಲ್ ಅವರಿಗೆ ಸಮರ್ಪಿಸಿದ್ದಾರೆ. ಸೌಮ್ಯಾ ಜಗನ್ನಾಥಮೂರ್ತಿ, ಶಶಾಂಕ್ ಪುರುಷೋತ್ತಮ್, ಮತ್ತು ಸಿದ್ದಾರ್ಥ್ ಮಾಧ್ಯಮಿಕ ಸಿನಿಮಾದಲ್ಲಿ ನಟಿಸಿದ್ದಾರೆ, ಸಿನಿಮಾಗೆ ಜೆಸ್ಸೆ ಕ್ಲಿಂಟನ್ ಸಂಗೀತ ನೀಡಿದ್ದಾರೆ.
SCROLL FOR NEXT