ನಿತ್ಯಾ ಮೆನನ್ 
ಸಿನಿಮಾ ಸುದ್ದಿ

ನಿತ್ಯಾ ಮೆನನ್‌ಗೆ ಚಿತ್ರರಂಗದಿಂದ ಬಹಿಷ್ಕಾರದ ಬೆದರಿಕೆ, ಅಸಲಿಗೆ ನಿತ್ಯಾ ಮಾಡಿದ್ದೇನು?

ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್‌ಗೆ ನಿರ್ಮಾಪಕರು ಚಿತ್ರರಂಗದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದು ಅಸಲಿಗೆ ನಿತ್ಯಾ ಮಾಡಿದ ತಪ್ಪೇನು ಇಲ್ಲಿದೆ ಮಾಹಿತಿ.

ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್‌ಗೆ ನಿರ್ಮಾಪಕರು ಚಿತ್ರರಂಗದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದು ಅಸಲಿಗೆ ನಿತ್ಯಾ ಮಾಡಿದ ತಪ್ಪೇನು ಇಲ್ಲಿದೆ ಮಾಹಿತಿ.
ನಿತ್ಯಾ ಮೆನನ್ ಕೆಲ ದಿನಗಳಿಂದ ಕಾಂಟ್ರವರ್ಸಿಯೊಂದರಲ್ಲಿ ಸಿಲುಕಿದ್ದಾರೆ. ನಿರ್ಮಾಪಕರನ್ನು ಭೇಟಿಯಾಗುತ್ತಿಲ್ಲ. ಈಕೆಗೆ ಚಿತ್ರರಂಗದ ಮೇಲೆ ಆಸಕ್ತಿ ಕಡಿಮೆ ಆಗಿದೆ. ಅವರು ಭಂಜದ ಕೋಳಿಯಂತಾಗಿದ್ದಾರೆ. ಗರ್ವದಿಂದ ವರ್ತಿಸುತ್ತಿದ್ದಾರೆ ಎಂದು ಮಲಯಾಳಂನ ನಿರ್ಮಾಪಕರು ಆರೋಪಿಸುತ್ತಿದ್ದಾರೆ. 
ನಿತ್ಯಾ ನಡೆ ನಮಗೆ ಕೋಪ ತರಿಸಿದ್ದು ಆಕೆಯನ್ನು ಚಿತ್ರರಂಗದಿಂದ ನಿಷೇಧಿಸುತ್ತೇವೆ ಎಂದು ನಿರ್ಮಾಪಕರು ಎಚ್ಚರಿಕೆ ಕೊಟ್ಟಿದ್ದಾರೆ. ಥಟ್ಸಾಯಂ ಒರು ಪೆನ್ಕುಟ್ಟಿ ಚಿತ್ರದ ಶೂಟಿಂಗ್ ವೇಳೆ ನಿತ್ಯಾ ಭೇಟಿಗೆ ಒಂದಿಷ್ಟು ನಿರ್ಮಾಪಕರು ಬಂದಿದ್ದರು. ಆಗ ಅವರ ಭೇಟಿಗೆ ನಿತ್ಯಾ ಮುಂದಾಗಿರಲಿಲ್ಲ. ಇದಕ್ಕೆ ಆಕ್ರೋಶಗೊಂಡ ನಿರ್ಮಾಪಕರು ಆಕೆಯನ್ನು ಚಿತ್ರರಂಗದಿಂದ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಿತ್ಯಾ ನನ್ನ ತಾಯಿ ಮೂರನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಇದರಿಂದ ಧೃತಿಗೆಟ್ಟಿರುವ ನಾನು, ಈ ನೋವನ್ನು ನುಂಗಿಕೊಂಡೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಶೂಟಿಂಗ್ ಮುಗಿದ ಮೇಲೆ ನಾನು ಕ್ಯಾರಾವ್ಯಾನ್ ನಲ್ಲಿ ಒಬ್ಬಳೇ ಕುಳಿತು ಅಳುತ್ತಿದ್ದೇನೆ. ನನ್ನ ನೋವು ನನಗೆ ಗೊತ್ತು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿದ್ದ ರಿಗ್ಗಿಂಗ್ ವಾತಾವರಣದಲ್ಲಿ ನಿಜವಾಗಿಯೂ ಕೆಲಸ ಮಾಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ