ಸಿನಿಮಾ ಸುದ್ದಿ

ಇದೇ ಮೊದಲು: ಈಗಾಗಲೇ ಡಬ್ ಆದ ಚಿತ್ರ ಕನ್ನಡಕ್ಕೆ ರೀಮೇಕ್!

Srinivas Rao BV
ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ಚಿತ್ರ ನಿರ್ಮಾಪಕರು ಡಬ್ ಆಗಿರುವ ಸಿನಿಮಾವೊಂದನ್ನು ರಿಮೇಕ್ ಮಾಡಲು ಚಿಂತನೆ ನಡೆಸಿದ್ದಾರೆ. 
ಅಜಿತ್ ಅವರ ಸಿನಿಮಾ ವಿಶ್ವಾಸಮ್ ನ್ನು ಜಗಮಲ್ಲಾ ಟೈಟಲ್ ನಲ್ಲಿ ಡಬ್ ಮಾಡಲಾಗಿತ್ತು. ಈಗ ಇದೇ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಆಗಲಿದೆ. ಅಜಿತ್ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದು ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗಲಿದೆ. ಈ ವಿಷಯದ ಬಗ್ಗೆ ಮಾಹಿತಿ ನೀಡಿರುವ ಶಿವರಾಜ್ ಕುಮಾರ್, "ಹೌದು ರಿಮೇಕ್ ಮಾಡುವುದರ ಬಗ್ಗೆ ನಿರ್ಮಾಪಕರ ಜೊತೆ ಮಾತನಾಡುತ್ತಿದ್ದೇನೆ, ಆದರೆ ಈ ವರೆಗೂ ಏನೂ ಅಂತಿಮಗೊಂಡಿಲ್ಲ, ಇನ್ನಷ್ಟೇ ಖಚಿತಪಡಿಸಬೇಕಿದೆ ಎಂದು ಹೇಳಿದ್ದಾರೆ.
SCROLL FOR NEXT