ಕೆಆರ್ ಪೇಟೆ:ನಿಖಿಲ್ ಎಲ್ಲಿದ್ದೀಯಪ್ಪಾ?’ ಎಂಬ ಡೈಲಾಗ್ ಸಾಮಾಜಿಕ ತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದು ಇದೀಗ ಅದೇ ಹೆಸರಿನ ಚಿತ್ರ ನಿರ್ಮಾಣಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಿರುಸಾದ ತಯಾರಿ ನಡೆದಿದೆ. ಆ ನಡುವೆ 'ನಿಖಿಲ್ ಎಲ್ಲಿದ್ದೀಯಪ್ಪಾ?’ ಚಿತ್ರದಲ್ಲಿ ನಟಿಸೋಕೆ ನಾನು ರೆಡಿ ಇದ್ದೇನೆಂದು ಖ್ಯಾತನಟರೊಬ್ಬರು ತಾನಾಗಿ ಒಪ್ಪಿಕೊಂಡಿದ್ದಾರೆ.
ಹೌದು, 'ನಿಖಿಲ್ ಎಲ್ಲಿದ್ದೀಯಪ್ಪಾ?’ಚಿತ್ರದಲ್ಲಿ ಅಭಿನಯಿಸಲು ತಾನು ತಯಾರಾಗಿರುವುದಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಹೇಳಿದ್ದಾರೆ.
"'ನಿಖಿಲ್ ಎಲ್ಲಿದ್ದೀಯಪ್ಪಾ?’ಹೆಸರಿನಲ್ಲಿ ನಾನೇ ಚಿತ್ರ ತಯಾರಿಸುವೆ, ಸಚಿವ ಸಿ.ಎಸ್. ಪುಟ್ಟರಾಜು ಇದಕ್ಕೆ ಬಂಡವಾಳ ಹಾಕಲಿದ್ದಾರೆ" ಎಂದು ನಿಖಿಲ್ ಹೇಳೀದ್ದಾರೆ.
'ನಿಖಿಲ್ ಎಲ್ಲಿದ್ದೀಯಪ್ಪಾ?’ಚಿತ್ರದ ಶೀರ್ಷಿಕೆಗೆ ಭಾರೀ ಡಿಮ್ಯಾಂಡ್ ಇದ್ದು ಇದನ್ನು ಬೇರೆಯವರಿಗೆ ನೀಡೋದು ಬೇಡ, ನಾನೇ ಚಿತ್ರ ತಯಾರಿಸುವೆ ಎಂದು ನಿಖಿಲ್ ಫಿಲ್ಮ್ ಛೇಂಬರ್ ಗೆ ಹೇಳಿದ್ದಾರಂತೆ,
ನಿಖಿಲ್ ಶುಕ್ರವಾರ ಮಂಡ್ಯ ಕೆ.ಆರ್. ಪೇಟೆ ತಾಲೂಕಿನಲ್ಲಿ ನಡೆಇದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಈ ಮೇಲಿನ ಹೇಳಿಕೆ ನಿಡಿದ್ದಾರೆ."ನನ್ನ ವಿರೋಧಿಗಳು ನನ್ನನ್ನು ಹೀಯಾಳಿಸಲು ಈ ಶೀರ್ಷಿಕೆಯನ್ನು ದಾಳವಾಗಿ ಉಪಯೋಗಿಸಿದ್ದರು. ಆದರೆ ಇದೇ ವೀಡಿಯೋದಿಂದ ನನಗೆ ಅಮೆರಿಕಾ ಸೇರಿ ಅನೇಕ ದೇಶಗಳಲ್ಲಿ ಭಾರೀ ಪ್ರಚಾರ ದೊರಕಿತು. ದೇಶ ವಿದೇಶದ ಹಲವರು ಈ ವೀಡಿಯೋ ನೋಡಿ ಟ್ರೋಲ್ ಮಾಡಿದ್ದಾರೆ. ಫಿಲ್ಮ್ ಛೇಂಬರ್ ಗೆ ಈ ಶೀರ್ಷಿಕೆ ಪಡೆಯಲು ಹಲವರು ಅರ್ಜಿ ಹಾಕಿದ್ದಾರೆ. ಆದರೆ ಈ ಶಿರ್ಷಿಕೆ ನಂದೇ ಆಗಿದೆ, ಪುಟ್ಟರಾಜಣ್ಣ (ಸಚಿವ ಪುಟ್ಟರಾಜು೦ ನಿರ್ಮಾಪಕರು, ನಾನೇ ಅಭಿನಯಿಸುವೆ" ಎಂದು ತಮಾಷೆಯಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿದ್ದಾರೆ. ಅವರು ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದರು.