ಕಲ್ಪನಾ 
ಸಿನಿಮಾ ಸುದ್ದಿ

ಕನ್ನಡ ಸಿನಿ ಬಾನಂಗಳದಲ್ಲಿ ಮಿಂಚಿ ಮರೆಯಾದ 'ಮಿನುಗುತಾರೆ' ಕಲ್ಪನಾ ಸಾವಿಗೆ ನಾಲ್ಕು ದಶಕ!

ಸ್ಯಾಂಡಲ್ ವುಡ್ ನ ಮಿನುಗು ತಾರೆ ಕಲ್ಪನಾ ಇಹಲೋಕ ತ್ಯಜಿಸಿ ಇಂದಿಗೆ (ಮೇ 12) ನಲವತ್ತು ವರ್ಷಗಳಾದವು. ಅತ್ಯಲ್ಪ ಅವಧಿಯಲ್ಲಿ ಕನ್ನಡ ಚಿತ್ರರಂಗವಿರುವ ತನಕವೂ ಶಾಶ್ವತವಾಗಿರುವಂಥ....

ಬೆಂಗಳೂರು: ಸ್ಯಾಂಡಲ್ ವುಡ್ ನ ಮಿನುಗು ತಾರೆ ಕಲ್ಪನಾ ಇಹಲೋಕ ತ್ಯಜಿಸಿ ಇಂದಿಗೆ (ಮೇ 12) ನಲವತ್ತು ವರ್ಷಗಳಾದವು. ಅತ್ಯಲ್ಪ ಅವಧಿಯಲ್ಲಿ ಕನ್ನಡ ಚಿತ್ರರಂಗವಿರುವ ತನಕವೂ ಶಾಶ್ವತವಾಗಿರುವಂಥ ಅದ್ಭುತ ಸಾಧನೆಯನ್ನು ಮಾಡಿ ಮತ್ತೆ ಬಾರದ ಲೋಕದತ್ತ ಹೊರಟು ಹೋದ ನಟಿ ಕಲ್ಪನಾ ನೆನಪು ಮಾತ್ರ ಕನ್ನಡ ಸಿನಿ ಪ್ರೇಕ್ಷಕರ ಹೃದಯದಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ.
ಕನ್ನಡದ ಮೇರು ಸಾಹಿತಿಗಳಾದ ಶಿವರಾಮ ಕಾಂರಂತ, ಸಿಪಿಕೆ, ಚದುರಂಗರಂತಹಾ ಘಟಾನುಘಟಿಗಳಿಂಡ ಮೆಚ್ಚುಗೆ ಪಡಿದ್ದ್ದ ನಟಿ ಕಲ್ಪನ್ ಆಮೇ 12, 1979 ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 
1943 ಜುಲೈ 18ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದ ಕಲ್ಪನಾ ಬೆಳ್ಳಿತೆರೆಗೆ ಬಂದದ್ದು 1963ರಲ್ಲಿ.  'ಸಾಕುಮಗಳು' ಅವರ ಮೊದಲ ಚಿತ್ರವಾಗಿದ್ದರೆ ಮಲೆಯ ಮಕ್ಕಳು' (1978).ಕಡೆಯ ಚಿತ್ರವಾಗಿತ್ತು. ಒಟ್ಟಾರೆ 78 ಚಿತ್ರದಲ್ಲಿ ನಟಿಸಿದ್ದ ಈ ತಾರೆ ಕನ್ನಡದ 69 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ 4 ತಮಿಳು ಚ್ವಿತ್ರಗಳು, ಎರಡು ಮಲಯಾಳಂ, ಒಂದು ತೆಲುಗು ಹಾಗೂ ಎರಡು ತುಳು ಚಿತ್ರಗಳಲ್ಲಿ ಸಹ ಅಭಿನಯಿಸಿದ್ದರು.
ಕನ್ನಡದ ಮೇರುನಟ ಡಾ. ರಾಜ್ ಜೋಡಿಯಾಗಿ 1ಕಲ್ಪನಾ ನಟಿಸಿದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ದರಲ್ಲಿಯೂ 'ಬಂಗಾರದ ಹೂವು', 'ಮಣ್ಣಿನಮಗ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗಳು ಲಭಿಸಿದ್ದವು.
ರಾಜ್ಯ ಸರ್ಕಾರದಿಂದ ಮೊಟ್ಟಮೊದಲಿಗೆ 'ಅತ್ಯುತ್ತಮ ನಟಿ ಪ್ರಶಸ್ತಿ' ಪಡೆದ ನಟಿ ಕಲ್ಪನಾ!ಮೂರು ಬಾರಿ ಶ್ರೇಷ್ಠ ನಟಿ ಗೌರವ. ಫಿಲಂಫೇರ್ ಪ್ರಶಸ್ತಿ ಪಡೆದ ಪ್ರಪ್ರಥಮ ಕನ್ನಡ  ನಟಿ ಸಹ ಇವರೇ ಎಂಬುದು ಸಹ ಅಚ್ಚರಿಯ ಸತ್ಯ.
ಇಂತಹಾ ನಟಿ ತಾವು ಗೋಡಗೇರಿ ಬಸವರಾಜ್ ನಾಟಕ ಕಂಪನಿಯ ನಾಟಕಕ್ಕಾಗಿ ಸಂಕೇಶ್ವರಕ್ಕೆ ಆಗಮಿಸಿದ್ದರು. ಆ ವೇಳೆ ಗೋಟೂರು ಗ್ರಾಮದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದರು. ಆದರೆ ಗೋಡಗೇರಿ ಅವರೊಡನೆ ಮನಸ್ತಾಪವಾಗಿ ಕಲ್ಪನಾ ಬೇಸತ್ತು ಆತ್ಮಹತ್ಯೆಗೆ ಶರನಾದರು ಎಂದು ಹೇಳಲಾಗುತ್ತದೆ. ಇಂದಿಗೂ ಆ ಪ್ರವಾಸಿ ಮಂದಿರ ಹಾಗೂ ಅದರ ಪಕ್ಕದ ಮಾವಿನ ಮರದ ಬಗ್ಗೆ ಗ್ರಾಮಸ್ಥರಲ್ಲಿ ನಾನಾ ಕಲ್ಪನೆಗಳಿದೆ.
ಇನ್ನು ಕಲ್ಪನಾ ಮರಣದ ಬಳಿಕ ಬೆಂಗಳೂರು ಕೋಣನಕುಂಟೆ ಕ್ರಾಸ್‌ನಿಂದ ಎರಡನೇ ಸ್ಟಾಪ್ ಗುಬ್ಲಾಳದಲ್ಲಿ ನಟಿ ಕಲ್ಪನಾ ಅವರ ಸಮಾಧಿ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT