ಸಿನಿಮಾ ಸುದ್ದಿ

ರೇಸ್ 'ಗೆ ಸಿದ್ದವಾಗಿರುವ ನಕುಲ್ ಗೋವಿಂದ್ ಗೆ ಕಾಡುತ್ತಿದೆ ಫ್ರೈಡೇ ಫಿವರ್

Shilpa D
ಸಿನಿಮಾ ರಂಗಕ್ಕೆ ಕಾಲಿಟ್ಟು 12 ವರ್ಷವಾಗಿದ್ದು, ಈಗಾಗಲೇ 10 ಸಿನಿಮಾಗಳಲ್ಲಿ ನಟಿಸಿರುವ ನಕುಲ್ ಗೋವಿಂದ್ ಫ್ರೈಡೇ ಫೀವರ್ ಗೆ ಒಳಗಾಗಿದ್ದಾರೆ. 
ಶುಕ್ರವಾರ ತೆರೆ ಕಾಣಲಿರುವ ರೇಸ್  ಸಿನಿಮಾಗಾಗಿ ನಕುಲ್ ಗೋವಿಂದ್ ಕಾಯುತ್ತಿದ್ದಾರೆ, ಎಲ್ಲವೂ ಅಂದುಕೊಂಡಂತೆ ಆದರೆ ಈ ಸಿನಿಮಾ ನಕುಲ್ ಜೀವನದಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಜೀವನದ ಜೊತೆ ರೇಸ್ ಮಾಡುವ ಕಥ ಹಂದರವುಳ್ಳ ಸಿನಿಮಾ ಇದಾಗಿದೆ.
ಪ್ರತಿ ವಾರ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. ಹಾಗೇಯೆ ಈ ವಾರ ರೇಸ್ ಕೂ ರಿಲೀಸ್ ಆಗುತ್ತಿದೆ. ಉಪೇಂದ್ರ, ಜಗ್ಗೇಶ್, ಮತ್ತು ಥ್ರಿಲ್ಲರ್ ಮಂಜು ಸೇರಿದಂತೆ ಹಲವರ ಜೊತೆ ಕೆಲಸ ಮಾಡಿರುವ ಅನುಭವವಿದೆ. ನಕುಲ್ ಜೊತೆ ಶೃತಿ ಆರ್. ನಾಯಕಿಯಾಗಿ ನಟಿಸಿದ್ದಾರೆ.
SCROLL FOR NEXT