ಅದ್ದೂರಿ-2 ಗಾಗಿ 8-ಪ್ಯಾಕ್ ಆದ ನಿರಂಜನ್ 
ಸಿನಿಮಾ ಸುದ್ದಿ

ಅದ್ದೂರಿ-2 ಗಾಗಿ 8-ಪ್ಯಾಕ್ ಗೆ ನಿರಂಜನ್ ಸಿದ್ಧತೆ!

"ಅದ್ದೂರಿ-2" ಗಾಗಿ ನಾಯಕ ನಿರಂಜನ್ ಸುಧೀಂದ್ರ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ರಮೇಶ್ ವೆಂಕಟೇಶಬಾಬು ನಿರ್ದೇಶನದ ಈ ಚಿತ್ರಕ್ಕಾಗಿ ನಿರಂಜನ್ ತಾವು ತಮ್ಮ ದೇಹವನ್ನು 8 -ಪ್ಯಾಕ್ಗೆ ತರಲು ಮುಂದಾಗಿದ್ದಾರೆ.

ಬೆಂಗಳೂರು: "ಅದ್ದೂರಿ-2" ಗಾಗಿ ನಾಯಕ ನಿರಂಜನ್ ಸುಧೀಂದ್ರ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ರಮೇಶ್ ವೆಂಕಟೇಶಬಾಬು ನಿರ್ದೇಶನದ ಈ ಚಿತ್ರಕ್ಕಾಗಿ ನಿರಂಜನ್ ತಾವು ತಮ್ಮ ದೇಹವನ್ನು 8 -ಪ್ಯಾಕ್ಗೆ ತರಲು ಮುಂದಾಗಿದ್ದಾರೆ.
ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್ ಗಳಲ್ಲಿ ನಿರಂಜನ್ ಕಾಣಿಸಲಿದ್ದಾರೆ. ಒಂದು ಶಾಲಾ ವಿದ್ಯಾರ್ಥಿಯಾಗಿ, ಇನ್ನೊಂದು 20-25ರ ಯುವಕನಾಗಿ ಹಾಗೂ ಕಡೆಯದಾಗಿ ಮತ್ತಷ್ಟು ಬಲಿಷ್ಟ ವ್ಯಕ್ತಿಯಾಗಿ ನಿರಂಜನ್ ತೆರೆ ಮೇಲೆ ಬರಲಿದ್ದಾರೆ. ಕಡೆಯ ಶೇಡ್ ನ ಪಾತ್ರಕ್ಕಾಘಿ ನಿರಂಜನ್ ತಮ್ಮ ದೇಹದಾರ್ಷ್ಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.
ಮೋಹನ್ ಜತೆಯಾಗಿ ಸಿಎಂಆರ್ ಪ್ರೊಡಕ್ಷನ್ಸ್ ಲಾಛನದಲ್ಲಿ ಶಂಕರ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರಂಜನ್ ಈ ಹಿಂದೆ 2012ರಲ್ಲಿ ತೆರೆಕಂಡ "ಅದ್ದೂರಿ"ಯಲ್ಲಿ ದ್ರುವ ಸರ್ಜಾ ಜತೆ ತೆರೆ ಹಂಚಿಕೊಂಡಿದ್ದರು. ಆದರೆ ಈಗ "ಅದ್ದೂರಿ- 2" ಹೆಸರಿನ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ಹಾಗೆಯೇ ಈ ಚಿತ್ರಕ್ಕೆ ಮೊದಲಿನ ಚಿತ್ರಕ್ಕೂ ಯಾವ ಸಂಬಂಧವಿಲ್ಲ ಎಂದು ನಿರ್ದ್ಶಕ ರಮೇಶ್ ಹೇಳಿದ್ದಾರೆ.
ಚಿತ್ರತಂಡ ಜೂನ್ 10ಕ್ಕೆ ಚಿತ್ರದ ಮಹೂರ್ತ ನಿಗದಿಪಡಿಸಿದೆ. ಈ ಚಿತ್ರವನ್ನು ಕನ್ನಡದಲ್ಲಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಡಬ್ ಮಾಡಿ ಏಕಕಾಲಕ್ಕೆ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.ರಾಘವೇಂದ್ರ ವಿ. ಈ ಚಿತ್ರಕ್ಕೆ ಸಂಗೀತ ನೀಡಿದ್ದರೆ ಹೈದರಾಬಾದ್ ನ ಯೋಗಿ ಈ ಚಿತ್ರದಛಾಯಾಗ್ರಹಣ ಮಾಡುತ್ತಿದ್ದಾರೆ.
ಇದೇ ವೇಳೆ ಚಿತ್ರಕ್ಕೆ ಮುಖ್ಯ ನಾಯಕಿಯ ಪಾತ್ರಕ್ಕಾಗಿ ನಟಿಯರ ಆಯ್ಕೆ ಇನ್ನೂ ನಡೆಯಬೇಕಿದ್ದು "ರನ್ ಆಂಟನಿ" ಖ್ಯಾತಿಯ ರೂಕ್ಷರ್ ಆಯ್ಕೆಯಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT