ಸಂಜನಾ ಆನಂದ್ 
ಸಿನಿಮಾ ಸುದ್ದಿ

ಕೃಷ್ಣ ಅಜಯ್ ರಾವ್ ಗೆ ಸಂಜನಾ ಆನಂದ್ ನಾಯಕಿ

ನಟಿ ಸಂಜನಾ ಆನಂದ್ ಕನ್ನಡ ಚಿತ್ರರಂಗ ಕಾಣುತ್ತಿರುವ ನವಪ್ರತಿಭೆಗಳಲ್ಲಿ ಒಬ್ಬರು. ಇದೀಗ ಆಕೆ ತಮ್ಮ ನಾಲ್ಕನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ನಟಿ ಸಂಜನಾ ಆನಂದ್ ಕನ್ನಡ ಚಿತ್ರರಂಗ ಕಾಣುತ್ತಿರುವ ನವಪ್ರತಿಭೆಗಳಲ್ಲಿ ಒಬ್ಬರು. ಇದೀಗ ಆಕೆ ತಮ್ಮ ನಾಲ್ಕನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. "ಕೆಮಿಸ್ಟ್ರಿ ಆಫ್ ಕರಿಯಪ್ಪ" ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಸಂಜನಾ ಅಜಯ್ ರಾವ್ ಅವರ ಮುಂಬರುವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ನಟಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ಸಹ ಅಭಿನಯಿಸುತ್ತಿದ್ದು ಅನಿಲ್ ಮಂಡ್ಯ ನಿರ್ದೇಶನದ "ಕ್ಷತ್ರಿಯ" ಚಿತ್ರದಲ್ಲಿ ಇವರು ಸರ್ಜಾ ಕುಟುಂಬದ ಕುಡಿಯೊಂದಿಗೆ ಅಭಿನಯಿಸುತ್ತಿದ್ದಾರೆ. ಚಿತ್ರದ ಮಹೂರ್ತ ಇಂದು ನೆರವೇರಲಿದೆ.
"ನನಗೆ ಬಹಳವೇ ಸಂತಸವಾಗುತ್ತಿದೆ. ಹಾಗೆಯೇ ನನ್ನ ಜವಾಬ್ದಾರಿಗಳು ಹೆಚ್ಚಿದೆ.  ಕರಿಯಪ್ಪ ಚಿತ್ರತಂಡಕ್ಕೆ ನಾನು ಧನ್ಯವಾದ ಹೇಳಬಯಸುತ್ತೇನೆ. ಅವರಿಗೆ ನಾನು  ಕೃತಜ್ಞಳಾಗಿರಬೇಕು.ಅವರು ನನ್ನನ್ನು ಚಿತ್ರದಲ್ಲಿ ಕೇಂದ್ರ ಪಾತ್ರವನ್ನಾಗಿ ತೆರೆ ಮೇಲೆ ತಂದಿದ್ದರು." ಸಂಜನಾ ಹೇಳಿದ್ದಾರೆ.
"ಕರುಯಪ್ಪ" ಚಿತ್ರದ ಜತೆಗೇ ನಟಿ "ಕುಷ್ಕ" ಎಂಬ ಇನ್ನೊಂದು ಚಿತ್ರದಲ್ಲಿ ಸಹ ಅಭಿನಯಿಸಿದ್ದರು. ಆ ಚಿತ್ರ ಇನ್ನು ಮೂರು ತಿಂಗಳಲ್ಲಿ ತೆರೆಗೆ ಬರಲಿದೆ.ಈ ನಡುವೆ ನಟಿ ತಾವು ವಿಕ್ರಮ್ ಯೋಗಾನಂದ್ ನಿರ್ದೇಶನದ ವೆಬ್ ಸೀರೀಸ್ "ಹನಿಮೂನ್" ನಲ್ಲಿ ಅಭಿನಯಿಸಿದ್ದು ತಮ್ಮ ಪಾಲಿನ ಶೂಟಿಂಗ್ ಮುಗಿಸಿದ್ದಾರೆ. ನಟಿ ಮುಂದಿಅನ 10 ದಿನಗಳಲ್ಲಿ ಅಜಯ್ ರಾವ್ ನಟನೆಯ ಚಿತ್ರದಲ್ಲಿ ಅಭಿನಯಿಸಲು ತಯಾರಾಗಲಿದ್ದಾರೆ. "ಕ್ಷತ್ರಿಯ" ಸೆಟ್ ಗೆ ನಟಿ ಆಗಸ್ಟ್ ನಲ್ಲಿ ಎಂಟ್ರಿ ಕೊಡುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT