ರಾಬರ್ಟ್ ಪೋಸ್ಟರ್ 
ಸಿನಿಮಾ ಸುದ್ದಿ

ಬೆಂಗಳೂರಿನಲ್ಲಿ ಸದ್ದಿಲ್ಲದೆ ರಾಬರ್ಟ್ ಚಿತ್ರೀಕರಣ ಪುನಾರಂಭ!

ಪುದುಚೇರಿಯಲ್ಲಿ ಚಿತ್ರೀಕರಣ ಮುಗಿಸಿ ವಾಪಾಸ್ಸಾಗಿರುವ ರಾಬರ್ಟ್ ಚಿತ್ರ ತಂಡ ಸದ್ದಿಲ್ಲದೆ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ

ಬೆಂಗಳೂರು: ಪುದುಚೇರಿಯಲ್ಲಿ ಚಿತ್ರೀಕರಣ ಮುಗಿಸಿ ವಾಪಾಸ್ಸಾಗಿರುವ ರಾಬರ್ಟ್ ಚಿತ್ರ ತಂಡ ಸದ್ದಿಲ್ಲದೆ ಬೆಂಗಳೂರಿನಲ್ಲಿ  ಚಿತ್ರೀಕರಣ ಮಾಡುತ್ತಿದೆ. ತರುಣ್ ಸುದೀರ್ ನಿರ್ದೇಶನ,  ದರ್ಶನ್  ನಾಯಕತ್ವದ ಈ ಚಿತ್ರ ಅಕ್ಷಯ ತೃತೀಯ ದಿನದಿಂದ ಚಿತ್ರೀಕರಣ ಸಾಗುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.
ತೆಲುಗಿನ ಜಗಪತಿ ಬಾಬು ಈ ಚಿತ್ರದಲ್ಲಿ ನಟಿಸುವುದನ್ನು ಖಚಿತಪಡಿಸಿರುವ ನಿರ್ದೇಶಕರು , ಬೇರೆ ಕಲಾವಿದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಸೆಟ್ ನಲ್ಲಿ ಮೊಬೈಲ್ ಪೋನ್ ಬಳಕೆಗೆ ನಿರ್ಬಂಧ  ವಿಧಿಸಲಾಗಿದ್ದು, ಬೇರೆ ಎಲ್ಲೂ ಮಾಹಿತಿ ಬಿಟ್ಟುಕೊಡದಂತೆ  ಸೆಟ್ ನಲ್ಲಿ ಇರುವವರ ಜೊತೆಗೆ  ಸಹಿ ಹಾಕಿಸಿಕೊಳ್ಳಲಾಗಿದೆ.
2020ಕ್ಕೆ ರಾಬರ್ಟ್  ಚಿತ್ರ ಬಿಡುಗಡೆಗೆ  ಯೋಜಿಸಲಾಗಿದೆ. ದರ್ಶನ್ ಅಭಿನಯದ ಎರಡು ಚಿತ್ರಗಳು ಈ ವರ್ಷ ಬಿಡುಗಡೆಯಾಗುತ್ತಿವೆ. ಹಲವು ಬಾರಿ ಚಿಂತಿಸಿದ ನಂತರ ಚಿತ್ರದ ಬಗ್ಗೆ ಎಲ್ಲೂ ಮಾಹಿತಿ ಬಿಟ್ಟುಕೊಡದಂತೆ ತಂಡ ನಿರ್ಧರಿಸಿದೆ ಎಂದು ತರುಣ್ ಸುಧೀರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್