ರವಿಚಂದ್ರನ್ 
ಸಿನಿಮಾ ಸುದ್ದಿ

ಹಿರೋಯಿನ್ ಇಲ್ಲದ 'ಆ ದೃಶ್ಯ'ದಲ್ಲಿ ರವಿಚಂದ್ರನ್ ಅಸಾಮಾನ್ಯ ಪಾತ್ರ- ನಿರ್ದೇಶಕ ಶಿವ ಗಣೇಶ್

ನಿಗೂಢ `ಕೊಲೆಯ ಸುತ್ತ ಸಾಗುವ  ಆ ದೃಶ್ಯ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಸಾಮಾನ್ಯ ಪಾತ್ರ ನಿರ್ವಹಿಸಿದ್ದಾರಂತೆ. ಹೀಗಂತಾ ಅವರೊಟ್ಟಿಗೆ ಕೆಲಸ ಮಾಡಿರುವ ನಿರ್ದೇಶಕ ಶಿವ ಗಣೇಶ್ ಹೇಳಿದ್ದಾರೆ.

ಬೆಂಗಳೂರು: ನಿಗೂಢ ಕೊಲೆಯ ಸುತ್ತ ಸಾಗುವ  ಆ ದೃಶ್ಯ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಸಾಮಾನ್ಯ ಪಾತ್ರ ನಿರ್ವಹಿಸಿದ್ದಾರಂತೆ. ಹೀಗಂತಾ ಅವರೊಟ್ಟಿಗೆ ಕೆಲಸ ಮಾಡಿರುವ ನಿರ್ದೇಶಕ ಶಿವ ಗಣೇಶ್ ಹೇಳಿದ್ದಾರೆ.

ಆ ದೃಶ್ಯ ಈ ವಾರ ತೆರೆಗೆ ಅಪ್ಪಳಿಸಲಿದ್ದು, ಇದೇ ಮೊದಲ ಬಾರಿಗೆ ರವಿಚಂದ್ರನ್ ಗೆ ಜೋಡಿಯಿಲ್ಲ. ಚಿತ್ರದಲ್ಲಿ ಯಾವುದೇ ಗೀತೆಗಳಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.

ರವಿಚಂದ್ರನ್ ಸಿನಿಮಾಗಳೆಂದರೆ ಅಲ್ಲಿ ಹಿರೋಹಿನ್ ಹಾಗೂ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಆದರೆ, ಈ ಸಿನಿಮಾ ವಿಭಿನ್ನವಾಗಿದ್ದು, ಅಲ್ಲಿ ಹಿರೋಹಿನ್, ಹಾಡುಗಳಿಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಇಲ್ಲಿ ರವಿಚಂದ್ರನ್ ಅವರ ಮತ್ತೊಂದು ಮುಖ ಅನಾವರಣಗೊಳ್ಳಲಿದೆ. 

ಈ ಬಗ್ಗೆ ಚರ್ಚಿಸಿದಾಗ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೋ ಎಂಬ ಬಗ್ಗೆ ರವಿಚಂದ್ರನ್ ಆತಂಕ ವ್ಯಕ್ತಪಡಿಸಿದ್ದರು.  ಆದರೆ, ಶೂಟಿಂಗ್ ಆರಂಭಿಸಿದಾಗ ಇದೊಂದು ಒಳ್ಳೇಯ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವಯಸ್ಸಿನಲ್ಲಿ ಕ್ರೇಜಿಸ್ಟಾರ್ ಸರಿಯಾದ ಕಥೆ ಆಯ್ದುಕೊಂಡಿದ್ದಾರೆ ಎಂದು ನಿರ್ದೇಶಕರು ತಿಳಿಸಿದರು.

ದೃಶ್ಯ ರೀತಿಯಲ್ಲಿ ಸಿನಿಮಾ ಕಥೆ ಇದೆ . ಆದರೆ , ದೃಶ್ಯದಲ್ಲಿ ಪೊಲೀಸ್ ಅಧಿಕಾರಿಗಳು ರವಿಚಂದ್ರನ್ ಅವರನ್ನು ತನಿಖೆಗೊಳಪಡಿಸುತ್ತಾರೆ. ಆದರೆ, ಆ ದೃಶ್ಯದಲ್ಲಿ ಅವರೇ ನಿವೃತ್ತ ಪೊಲೀಸ್ ಅಧಿಕಾರಿಯಾಗಿರುತ್ತಾರೆ ಎಂದು ಅವರು ವಿವರಿಸಿದರು. 

ರವಿಚಂದ್ರನ್ ಅವರ ಕೆಲಸದ ಶೈಲಿ ಬಗ್ಗೆ  ಕೇಳಿದ್ದೆ. ನಂತರ ಅವರೇ ಆ ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಲಾಯಿತು. ಕೆಲ ಶಾಟ್ ಗಳಲ್ಲಿ ರವಿ ಸರ್ ಸಹಾಯ ಮಾಡಿದ್ದಾರೆ. ಕ್ಯಾಮರಾ ಕೂಡಾ ಆಪರೇಟ್ ಮಾಡಿದ್ದಾರೆ. ಅವರಿಂದ ಸೂಕ್ತ ಸಲಹೆಗಳು ಬರುತ್ತಿದ್ದವು. ಅವರ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು ಎಂದು ಶಿವಗಣೇಶ್ ತಿಳಿಸಿದರು. 

ಕೆ. ಮಂಜು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಅಚ್ಯುತ್ ಕುಮಾರ್, ಚೈತ್ರಾ ಅಚಾರ್, ನಿಸಾರ್ಗ ಮತ್ತಿತರರು ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತ್ರಿಶೂರ್‌ನಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ತಮಿಳು ನಾಡಿನ 8 ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ದಾರುಣ ಸಾವು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

China ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕಕ್ಕೆ; ಸೆ.24ರಂದು ಶ್ವೇತಭವನದಲ್ಲಿ ಔತಣಕೂಟ, Iran ಸಂಘರ್ಷವನ್ನು ‘ಸಣ್ಣ ವಿಚಾರ’ ಎಂದ Trump

ಒಬ್ಬ ರಾಜಿನಾಮೆ ಕೊಟ್ಟರೇನು? ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ; ಸಿಎಂ ಡಿಕೆ ಶಿವಕುಮಾರ್

Park Billiಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ: ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್..!