ಸುದೀಪ್ 
ಸಿನಿಮಾ ಸುದ್ದಿ

ಅಜಯ್ ರಾವ್ ನಟನೆಯ ಕೃಷ್ಣ ಟಾಕೀಸ್ ಗೆ ಸುದೀಪ್ ಗಾಯನ

ಅಜೇಯ್‌ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಹಾಡೊಂದನ್ನು ಹಾಡಲು ನಟ ಕಿಚ್ಚ ಸುದೀಪ್ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. 

ಅಜೇಯ್‌ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಹಾಡೊಂದನ್ನು ಹಾಡಲು ನಟ ಕಿಚ್ಚ ಸುದೀಪ್ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. 

ಸುದೀಪ್‌ ಒಳ್ಳೆಯ ಗಾಯಕರು ಅನ್ನೋದು ಎಲ್ಲರಿಗೂ ಗೊತ್ತು. ಅವರು ಸುಮ್ಮನೆ ಹಾಡಲು ಒಪ್ಪುವುದಿಲ್ಲ. ಸಾಹಿತ್ಯ ಇಷ್ಟವಾಗಬೇಕು, ಟ್ಯೂನ್‌ ಚೆನ್ನಾಗಿದೆ ಎನಿಸಬೇಕು. ಎಲ್ಲದ್ದಕ್ಕೂ ಹೆಚ್ಚಾಗಿ, ಟ್ರೆಂಡಿ ಸಾಂಗ್‌ ಅಂದರೆ ಅವರು ಹಾಡಲು ಮುಂದಾಗುತ್ತಾರೆ.

ಅಷ್ಟಕ್ಕೂ ಸುದೀಪ್‌ ಹಾಡಲು ಒಪ್ಪಿರೋದು ಸಂಗೀತ ನಿರ್ದೇಶಕ ಶ್ರೀಧರ್‌ ವಿ.ಸಂಭ್ರಮ್‌ ಅವರಿಗಾಗಿ. ಹೌದು, ಸುದೀಪ್‌ ಅವರನ್ನು ಇತ್ತೀಚೆಗೆ ಶ್ರೀಧರ್‌ ವಿ. ಸಂಭ್ರಮ್‌ ಅವರು ಭೇಟಿಯಾಗಿ ಹಾಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್‌ ಹಾಡುವ ಟ್ರಾಕ್‌ ಸಾಂಗ್‌ ಅನ್ನು ಸಹ ಸುದೀಪ್‌ ಅವರಿಗೆ ಕೇಳಿಸಿದ್ದಾರೆ. ಹಾಡು ಕೇಳಿದ ಸುದೀಪ್‌, ಇಷ್ಟಪಟ್ಟು, ಹಾಡುವುದಾಗಿ ಹೇಳಿದ್ದಾರೆ.

ಪ್ರಮೋದ್‌ ಮರವಂತೆ ಮತ್ತು ಅಭಿ ಎಸ್‌. ಇಬ್ಬರೂ ಸೇರಿ ಬರೆದಿರುವ “ನೈಟಿ ಮಾತ್ರ ಹಾಕೋಬೇಡ ಮೇನಕ, ನಮಗೆ ನೈಂಟಿ ಹೊಡದಂಗಾಗ್ತದೆ ಜೀವಕ…’ ಎಂಬ ಹಾಡಿಗೆ ಸುದೀಪ್‌ ಅವರು ಧ್ವನಿಯಾಗಲಿದ್ದಾರೆ. ಈ ಚಿತ್ರವನ್ನು ವಿಜಯ್‌ ಆನಂದ್‌ ನಿರ್ದೇಶಿಸಿದ್ದು, ಗೋವಿಂದರಾಜು ನಿರ್ಮಾಣ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್

kerala: ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ: 4 ಮಂದಿಗೆ ಗಂಭೀರ ಗಾಯ, Video

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ; ಕಾರಣ ನಿಗೂಢ!