ಹರೇ ರಾಮ, ಹರೇ ಕೃಷ್ಣ ಬಿಕಿನಿ ತೊಟ್ಟು ವಿವಾದಕ್ಕೀಡಾದರಾ ವಾಣಿ ಕಪೂರ್!? 
ಸಿನಿಮಾ ಸುದ್ದಿ

ಹರೇ ರಾಮ, ಹರೇ ಕೃಷ್ಣ ಬಿಕಿನಿ ತೊಟ್ಟು ವಿವಾದಕ್ಕೀಡಾದರಾ ವಾಣಿ ಕಪೂರ್!?

ಹಿಂದೂ ದೇವತೆಗಳಿರುವ ಡೋರ್ ಮ್ಯಾಟ್ ಗಳು, ಬಿಕಿನಿಗಳನ್ನು ಮುದ್ರಿಸಿದ್ದ ಘಟನೆಗಳು ನಿಮಗೆಲ್ಲರಿಗೂ ಗೊತ್ತೇ ಇರುತ್ತೆ. ಈಗ ಇಂಥಹದ್ದೇ ಪ್ರಕರಣವೊಂದಲ್ಲಿ ಬಾಲಿವುಡ್ ಬೆಡಗಿ ಯಡವಟ್ಟು ಮಾಡಿಕೊಂಡಿದ್ದು ವಿವಾದಕ್ಕೀಡಾಗಿದ್ದಾರೆ. 

ಹಿಂದೂ ದೇವತೆಗಳಿರುವ ಡೋರ್ಮ್ಯಾಟ್ಗಳು, ಬಿಕಿನಿಗಳನ್ನು ಮುದ್ರಿಸಿದ್ದ ಘಟನೆಗಳು ನಿಮಗೆಲ್ಲರಿಗೂ ಗೊತ್ತೇ ಇರುತ್ತೆ. ಈಗ ಇಂಥಹದ್ದೇ ಪ್ರಕರಣವೊಂದಲ್ಲಿ ಬಾಲಿವುಡ್ ಬೆಡಗಿ ಯಡವಟ್ಟು ಮಾಡಿಕೊಂಡಿದ್ದು ವಿವಾದಕ್ಕೀಡಾಗಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದೆ. 

ಬಾಲಿವುಡ್ ನಟಿ ವಾಣಿ ಕಪೂರ್ ಹರೇ ರಾಮ, ಹರೇ ಕೃಷ್ಣ ಎಂಬ ಪದಗಳ ಮುದ್ರಣವಿರುವ ಬಿಕಿನಿ ಧರಿಸಿ ವಿವಾದಕ್ಕೀಡಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಾಣಿ ಕಪೂರ್ ನಡೀ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 

ಬಿಕಿನಿ ಮೇಲೆ ಹರೇ ರಾಮ್, ಹರೇ ಕೃಷ್ಣ ಪದಗಳ ಮುದ್ರಣ ಮಾಡಿರುವುದು ತಪ್ಪು, ಅದನ್ನು ಧರಿಸಿರುವುದೂ ತಪ್ಪಾಗಿದ್ದು, ಇದರಿಂದಾಗಿ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಲಿದೆ, ಈ ರೀತಿ ಭಾವನೆಗಳಿಗೆ ನೋವುಂಟು ಮಾಡಿದ ನಟಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. 

 
ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆಯೇ ವಾಣಿ ಕಪೂರ್ ಅಭಿಮಾನಿಗಳು ತಮ್ಮ ನಟಿಯನ್ನು ಸಮರ್ಥಿಸಿಕೊಂಡಿದ್ದು, ವಾಣಿ ಕಪೂರ್ ಅವರ ಹೆಸರಿಗೆ ಕಳಂಕ ತರಲು ಫೇಕ್ ಫೋಟೋಗಳನ್ನು ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?