ಸುದೀಪ್ 
ಸಿನಿಮಾ ಸುದ್ದಿ

ರಿಮೇಕ್ ಅಲ್ಲ ಸ್ವಮೇಕ್: ಮತ್ತೆ ನಿರ್ದೇಶನಕ್ಕಿಳಿದ ಸುದೀಪ್ ಸ್ಪಷ್ಟನೆ

ಸ್ಯಾಂಡಲ್​ವುಡ್ ಬಾದ್​ಷಾ ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಜೋರಾಗಿ ಕೇಳಿ ಬರುತ್ತಿತ್ತು. ಅದು ಯಾವ ಸಿನಿಮಾ, ರಿಮೇಕಾ ಇಲ್ಲ ಸ್ವಮೇಕಾ ಎಂಬ ಪ್ರಶ್ನೆಗಳು ಸಹ ಅಭಿನಯ ಚಕ್ರವರ್ತಿ ಅಭಿಮಾನಿಗಳಲ್ಲಿತ್ತು.

ಬೆಂಗಳೂರು: ಸ್ಯಾಂಡಲ್​ವುಡ್ ಬಾದ್​ಷಾ ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಜೋರಾಗಿ ಕೇಳಿ ಬರುತ್ತಿತ್ತು. ಅದು ಯಾವ ಸಿನಿಮಾ, ರಿಮೇಕಾ ಇಲ್ಲ ಸ್ವಮೇಕಾ ಎಂಬ ಪ್ರಶ್ನೆಗಳು ಸಹ ಅಭಿನಯ ಚಕ್ರವರ್ತಿ ಅಭಿಮಾನಿಗಳಲ್ಲಿತ್ತು. ಈ ಕುತೂಹಲಕಾರಿ ಪ್ರಶ್ನೆಗೆ ಖುದ್ದು ಕಿಚ್ಚ ಸುದೀಪ್ ಅವರೇ ಉತ್ತರಿಸಿದ್ದಾರೆ.

'ಮೈ ಆಟೋಗ್ರಾಫ್' ಸಿನಿಮಾ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದ ಸುದೀಪ್ ನಟನೆಗೆ ಮಾತ್ರವಲ್ಲ ಆ್ಯಕ್ಷನ್ ಕಟ್​ಗೂ ಸೈ ಎಂದು ಮೊದಲ ಚಿತ್ರದಲ್ಲೇ ನಿರೂಪಿಸಿದ್ದರು. ಆ ಬಳಿಕ ನೋವು ನಲಿವಿನ ಕಥೆ ಹೇಳಿದ್ದ '73 ಶಾಂತಿ ನಿವಾಸ', ಮಾಸ್ ಪ್ರೇಕ್ಷಕರಿಗಾಗಿ 'ವೀರ ಮದಕರಿ', ಕೆಂಪೇಗೌಡ, ಯುವಪ್ರೇಮಿಗಳಿಗಾಗಿ ಜಸ್ಟ್ ಮಾತ್ ಮಾತಲ್ಲಿ' ಚಿತ್ರ ನಿರ್ದೇಶಿಸಿ ಸುದೀಪ್ ಮೋಡಿ ಮಾಡಿದ್ದರು.

ಅದರಲ್ಲೂ 2014ರಲ್ಲಿ 'ಮಾಣಿಕ್ಯ' ಚಿತ್ರವನ್ನು ನಟನೆಯೊಂದಿಗೆ ನಿರ್ದೇಶಿಸಿ ಬಾಕ್ಸಾಫೀಸ್​ನ್ನು ಕೊಳ್ಳೆ ಹೊಡೆದಿದ್ದರು. ಇದೀಗ ಐದು ವರ್ಷಗಳ ಬಳಿಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲು 'ಪೈಲ್ವಾನ್' ರೆಡಿಯಾಗುತ್ತಿದ್ದಾರೆ. 

'ನಾನು ನಿರ್ದೇಶಿಸುತ್ತಿರುವುದು ಒರಿಜಿನಲ್ ಸ್ಕ್ರಿಪ್ಟ್​. ಈ ಚಿತ್ರದ ಕಥೆಗಾಗಿ ನಮ್ಮ ತಂಡದ ಸದಸ್ಯರು ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಆ ಕಥೆಯ ಬಗ್ಗೆ ನಾನು ಕೂಡ ಉತ್ಸುಕನಾಗಿದ್ದೇನೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ' ಎಂದು ಸ್ಯಾಂಡಲ್​ವುಡ್ ಬಿಗ್ ಬಾಸ್ ಸುದೀಪ್ ತಿಳಿಸಿದ್ದಾರೆ.ಅಲ್ಲಿಗೆ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದ್ದ ರಿಮೇಕಾ, ಸ್ವಮೇಕಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಸದ್ಯ ಸುದೀಪ್ ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ-3 ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

'30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ,ಇನ್ನು ಸಾಧ್ಯವಿಲ್ಲ': ನಿವೃತ್ತಿಯ ಸುಳಿವು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ಇಂಗಿತ!

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!