ದ್ರುವನ್ ಚಿತ್ರದ ಮಹೂರ್ತದಲ್ಲಿ ದರ್ಶನ್ ಹಾಗೂ ಶಿವಣ್ಣ 
ಸಿನಿಮಾ ಸುದ್ದಿ

ಶಿವಣ್ಣ, ದರ್ಶನ್ ನನ್ನ ಚಿತ್ರದ ಮಹೂರ್ತಕ್ಕೆ ಆಗಮಿಸಿದ್ದು ಅದ್ಭುತ ಕ್ಷಣ: ಧ್ರುವನ್

ಸೂರಜ್ ಕುಮಾರ್ ಧ್ರುವನ್ ಆಗಿ ಹೆಸರು ಬದಲಿಸಿಕೊಂಡ ಬಳಿಕ ಅವರ ಅದೃಷ್ಟ ಖುಲಾಯಿಸಿದೆ.ರಘು ಕೋವಿ ನಿರ್ದೇಶನದಲ್ಲಿ ಈ ನವನಟ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಚಿತ್ರದ ಮಹೂರ್ತ ಶುಕ್ರವಾರ ನೆರವೇರಿದ್ದು ಈ ವೇಳೆ ಸ್ಟಾರ್ ನಟರಾದ  ಶಿವರಾಜ್‌ಕುಮಾರ್ ಮತ್ತು ದರ್ಶನ್ ಕ್ಲಾಪ್‌ಬೋರ್ಡ್‌ ಟೇಕ್ ಮಾಡಿ ಶುಭಕೋರಿದ್ದು ವಿಶೇಷವಾಗಿತ್ತು.

ಸೂರಜ್ ಕುಮಾರ್ ಧ್ರುವನ್ ಆಗಿ ಹೆಸರು ಬದಲಿಸಿಕೊಂಡ ಬಳಿಕ ಅವರ ಅದೃಷ್ಟ ಖುಲಾಯಿಸಿದೆ.ರಘು ಕೋವಿ ನಿರ್ದೇಶನದಲ್ಲಿ ಈ ನವನಟ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಚಿತ್ರದ ಮಹೂರ್ತ ಶುಕ್ರವಾರ ನೆರವೇರಿದ್ದು ಈ ವೇಳೆ ಸ್ಟಾರ್ ನಟರಾದ  ಶಿವರಾಜ್‌ಕುಮಾರ್ ಮತ್ತು ದರ್ಶನ್ ಕ್ಲಾಪ್‌ಬೋರ್ಡ್‌ ಟೇಕ್ ಮಾಡಿ ಶುಭಕೋರಿದ್ದು ವಿಶೇಷವಾಗಿತ್ತು.

ಬಿ.ಎಸ್.ಸುಧೀಂದ್ರ ನಿರ್ಮಿಸಿರುವ ಈ ಚಿತ್ರಮಲಯಾಳಂ ನಟಿ ಪ್ರಿಯಾ ವಾರಿಯರ್‌ಗೆ ಎರಡನೇ ಕನ್ನಡ ಚಿತ್ರವಾಗಿರಲಿದೆ.ಶ್ರೇಯಸ್ ಮಾನ್ಯು ಅಭಿನಯದ ’ವಿಷ್ಣು ಪ್ರಿಯಾ” ಈ ನಟಿಯ ಚ್ವೊಚ್ಚಲ ಕನ್ನಡ ಸಿನಿಮಾ ಆಗಿದೆ.

"ಇದು ನನ್ನ ಪಾಲಿನ ಅತ್ಯದ್ಭುತ ಕ್ಷಣ ಇದನ್ನು ನಾನು ಕೆಲವೇ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ." ಧ್ರುವನ್ ಹೇಳಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರ ಚಿತ್ರೀಕರಣ ಡಿಸೆಂಬರ್ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಇನ್ನು ಧ್ರುವನ್ ನಟ ನಿರ್ಮಾಪಕ ಎಸ್.ಎ.ಶ್ರೀನಿವಾಸ್ ಅವರ ಪುತ್ರರಾಗಿದ್ದಾರೆ. ಶ್ರೀನಿವಾಸ್ ಕನ್ನಡದ ವರನಟ ಡಾ. ರಾಜ್ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರ ಎನ್ನುವುದು ಗಾನೀಯ ಅಂಶ. ಚಿತ್ರದ ಸಂಗೀತವನ್ನು ಅರ್ಜುನ್ ಜನ್ಯಾ ಸಂಯೋಜಿಸಲಿದ್ದು, ಸತ್ಯ ಹೆಗ್ಡೆ ಕ್ಯಾಮರಾಮ್ಯಾನ್ ಆಗಿ ಸೈನ್ ಅಪ್ ಆಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT