ಸಿನಿಮಾ ಸುದ್ದಿ

ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ: ಇಫಿಗೆ, ಐಸಿಎಫ್ ಟಿ- ಯುನೆಸ್ಕೋ ಫೆಲಿನಿ ಪುರಸ್ಕಾರ

Srinivasamurthy VN

ಪಣಜಿ: ಐವತ್ತು ವರ್ಷಗಳನ್ನು ಅದ್ಭುತವಾಗಿ ಪೂರ್ಣಗೊಳಿಸಿರುವ ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ - ಇಫಿಗೆ, ಇಂಟರ್ ನ್ಯಾಷನಲ್ ಕೌನ್ಸಿಲ್ ಫಾರ್ ಫಿಲ್ಮ್ ಟೆಲಿವಿಷನ್ ಮತ್ತು ಆಡಿಯೋ-ವಿಷುಯಲ್ ಕಮ್ಯುನಿಕೇಷನ್, ಐಸಿಎಫ್ ಟಿ- ಯುನೆಸ್ಕೋ ಫೆಲಿನಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಐಸಿಎಫ್ ಟಿ ಮಹಾ ನಿರ್ದೇಶಕ ಜಾರ್ಜಸ್ ಡುಪಾಂಟ್ ಬುಧವಾರ ಘೋಷಿಸಿದರು.

ಚಲನಚಿತ್ರೋತ್ಸವ ನಡೆಯುತ್ತಿರುವ ಪಣಜಿಯಲ್ಲಿ, ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜಸ್ ಡುಪಾಂಟ್, ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಅತ್ಯಂತ ಸುಂದರ ಸ್ದಳದಲ್ಲಿ ಅದ್ಬುತವಾಗಿ ನಡೆದಿದೆ. ಐವತ್ತನೇ ಚಿತ್ರೋತ್ಸವ ಆಚರಿಸುತ್ತಿರುವುದು ನೋಡಿ ನಮಗೆ ಸಂತೋಷವಾಗಿದೆ. ಇಫಿ ಇಡೀ ಜಗತ್ತಿಗೆ ದೀಪ ಸ್ತಂಭದ ರೀತಿ ಕಂಗೊಳಿಸುತ್ತಿದೆ. ದೀಪ ಸ್ತಂಭದ ಮೂಲಕ ಉಳಿದ ಜಗತ್ತನ್ನು ಪ್ರಜ್ವಲಗೊಳಿಸಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದರು.

ಚಲನ ಚಿತ್ರಗಳು ಪ್ರಸ್ತುತ ದಿನಗಳಲ್ಲಿ ಹೆಚ್ಚು ಅಕ್ರಮಣ ಶೀಲವಾಗುತ್ತಿವೆ. ವಾಸ್ತವಾಗಿ ನಮ್ಮ ಸುತ್ತ ಮುತ್ತ ಎನು ನಡೆಯುತ್ತಿದೆ ಎಂಬುದನ್ನು ಜನರು ನೋಡಬಹುದಾಗಿದೆ. ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡದೆ ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಎಂದರು.

SCROLL FOR NEXT