ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

'ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿ': ಜಗ್ಗೇಶ್ ಆಕ್ರೋಶ ಯಾರ ವಿರುದ್ಧ?

ಕನ್ನಡ ಚಿತ್ರರಂಗದ ವಿರುದ್ಧ ಮತ್ತೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ನಟ ಜಗ್ಗೇಶ್ ಆಕ್ರೋಶಕ್ಕೆ ಕಾರಣ ಏನು ಗೊತ್ತಾ?

ಉತ್ತಮ ಪ್ರೇಕ್ಷಕರ ಹೊರತಾಗಿಯೂ ಕಾಳಿದಾಸ ಕನ್ನಡಮೇಷ್ಟ್ರು ಚಿತ್ರಮಂದಿರಗಳಿಂದ ಚಿತ್ರ ಎತ್ತಂಗಡಿ

ಬೆಂಗಳೂರು: ಕನ್ನಡ ಚಿತ್ರರಂಗದ ವಿರುದ್ಧ ಮತ್ತೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ನಟ ಜಗ್ಗೇಶ್ ಆಕ್ರೋಶಕ್ಕೆ ಕಾರಣ ಏನು ಗೊತ್ತಾ?

ಹೌದು.. ಇತ್ತೀಚೆಗೆ ನಟ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದು ಮಾತ್ರವಲ್ಲದೇ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಆದರೆ ಇದೀಗ ಇದೇ ಚಿತ್ರವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂದು ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಉತ್ತಮ ಕಲೆಕ್ಷನ್ ಇದ್ದರೂ ಥಿಯೇಟರ್ ಮಾಲೀಕರು ಬಲವಂತವಾಗಿ ಚಿತ್ರವನ್ನು ತೆಗೆಯುತ್ತಿದ್ದಾರೆ. ಉತ್ತಮ ಚಿತ್ರಕ್ಕೆ ಆಗುತ್ತಿರುವ ಮೋಸವನ್ನು ನೋಡಿಯೂ ಕೂಡ ಚಿತ್ರರಂಗದ ಹಿರಿಯರು ಮೌನವಾಗಿದ್ದಾರೆ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ವಿದ್ಯುತ್ ಚಿತಾಗಾರವಾಯಿತು ಕನ್ನಡ ಚಿತ್ರರಂಗ! ಕರುಣೆ ಇಲ್ಲದೆ ಬಂದಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳವೃತ್ತಿಯಾಗಿದೆ ಚಿತ್ರರಂಗ!ಯಶಸ್ವಿಯಾದ ಕಾಳಿದಾಸಕನ್ನಡಮೇಷ್ಟ್ರು ಕರುಣೆಯಿಲ್ಲದೆ ಎತ್ತಂಗಡಿ ಅನೇಕ ಚಿತ್ರಮಂದಿರದಲ್ಲಿ! ಧನ್ಯವಾದ ಕಿವಿಡು ಕುರುಡು ಚಿತ್ರರಂಗದ ಹಿರಿಯರಿಗೆ! ಉದ್ದಾರ ಕನ್ನಡಚಿತ್ರರಂಗ.. ಶುಭಮಸ್ತು ಕನ್ನಡಕ್ಕೆ! ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT