ಸಿನಿಮಾ ಸುದ್ದಿ

ಅನೂಪ್ ಭಂಡಾರಿ ನಿರ್ದೇಶನದಲ್ಲಿ 'ಫ್ಯಾಂಟಮ್' ಆಗಲಿದ್ದಾರೆ 'ಪೈಲ್ವಾನ್'

Shilpa D

ಅನೂಪ್ ಭಂಡಾರಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ, ಸಿನಿಮಾಗೆ 'ಫ್ಯಾಂಟಮ್' ಎಂಬು ಶೀರ್ಷಿಕೆ ಇಡಲಾಗಿದೆ.

ಕಿಚ್ಚ ಸುದೀಪ್‌ ಅಭಿನಯದ “ಪೈಲ್ವಾನ್‌’ ಚಿತ್ರ ಪ್ರದರ್ಶನ ಕಾಣುತ್ತಿದೆ. ಇನ್ನೊಂದು ಕಡೆ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿದ್ದು, ಡಿಸೆಂಬರ್‌ ಹೊತ್ತಿಗೆ ಚಿತ್ರೀಕರಣ ಮುಗಿಯಲಿದೆ. 

ಡಿಸೆಂಬರ್ ನಲ್ಲಿ ಅನೂಪ್‌ ಭಂಡಾರಿ ನಿರ್ದೇಶನದ ಚಿತ್ರ. “ರಂಗಿತರಂಗ’ ಅನೂಪ್‌ ಭಂಡಾರಿ ನಿರ್ದೇಶನದ ಹೊಸ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. 

ಈ ಹಿಂದೆ ಸುದೀಪ್‌ ಮತ್ತು ಅನೂಪ್‌ ಭಂಡಾರಿ ಕಾಂಬಿನೇಶನ್‌ನಲ್ಲಿ “ಬಿಲ್ಲಾ ರಂಗ ಬಾಷಾ’ ಚಿತ್ರ ಅನೌನ್ಸ್‌ ಆಗಿತ್ತು. ಆದರೆ, ಕಾರಣಾಂತರಗಳಿಂದ ಈ ಚಿತ್ರ ಕೆಲಕಾಲ ಮುಂದಕ್ಕೆ ಹೋಗಿದ್ದು, “ಬಿಲ್ಲಾ ರಂಗ ಬಾಷಾ’ ಚಿತ್ರದ ಬದಲಾಗಿ ಸುದೀಪ್‌ ಮತ್ತು ಅನೂಪ್‌ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರವೊಂದು ಶುರುವಾಗಲಿದ್ದು, ಡಿಸೆಂಬರ್‌ನಲ್ಲಿ ಈ ಚಿತ್ರ ಸೆಟ್ಟೇರಲಿದೆ.

ಚಿತ್ರವನ್ನು ಜಾಕ್‌ ಮಂಜು ನಿರ್ಮಿಸಲಿದ್ದಾರೆ. ಮೂಲಗಳ ಪ್ರಕಾರ ಸದ್ಯ ಈ ಚಿತ್ರಕ್ಕೆ 'ಫ್ಯಾಂಟಮ್'’ ಎಂದು ಹೆಸರಿಡಲಾಗಿದೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

ಚಿರಂಜೀವಿ ಅಭಿನಯದ  ಸೈ ರಾ ನರಸಿಂಹ ರೆಡ್ಡಿ ಸಿನಿಮಾದಲ್ಲೂ ಸುದೀಪ್ ನಟಿಸಿದ್ದು, ಅಕ್ಟೋಬರ್ 2 ರಂದು ರಿಲೀಸ್ ಆಗುತ್ತಿದೆ.

SCROLL FOR NEXT