ಗೆಳೆಯನ ಜತೆ 'ಆ ದಿನಗಳು' ಅರ್ಚನಾ ನಿಶ್ಚಿತಾರ್ಥ 
ಸಿನಿಮಾ ಸುದ್ದಿ

ಚಿತ್ರಲೇಖನ: ಗೆಳೆಯನ ಜತೆ 'ಆ ದಿನಗಳು' ಅರ್ಚನಾ ನಿಶ್ಚಿತಾರ್ಥ

ಆ ದಿನಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು  ಪ್ರಸಿದ್ದ ರಿಯಾಲಿಟಿ ಶೋ ತೆಲುಗಿನ ಬಿಗ್ ಬಾಸ್ ಮೊದಲ ಸೀಸನ್ ಸ್ಪರ್ಧಿಯಾಗಿ ಮನೆಮಾತಾಗಿದ್ದ ನಟಿ ಅರ್ಚನಾ ವೇದಾ ಇದೀಗ ಗೆಳೆಯನೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆ ದಿನಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು  ಪ್ರಸಿದ್ದ ರಿಯಾಲಿಟಿ ಶೋ ತೆಲುಗಿನ ಬಿಗ್ ಬಾಸ್ ಮೊದಲ ಸೀಸನ್ ಸ್ಪರ್ಧಿಯಾಗಿ ಮನೆಮಾತಾಗಿದ್ದ ನಟಿ ಅರ್ಚನಾ ವೇದಾ ಇದೀಗ ಗೆಳೆಯನೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ಚಿತ್ರರಂಗದಿಂದ ದೂರುವಿದ್ದ ನಟಿ ಸದ್ದಿಲ್ಲದೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದಾರೆ.

ಅರ್ಚನಾ ವೇದಾ ಅವರ ನಿಜವಾದ ಹೆಸರು ಅರ್ಚನಾ ಶಾಸ್ತ್ರಿ. ಇವರು ಜಗದೀಶ್ ಎಂಬುವವರನ್ನು ಬಹುಕಾಲದಿಂದ ಪ್ರೀತಿಸುತ್ತಿದ್ದರು.ಹೆಲ್ತ್ ಕೇರ್ ಕಂಪನಿಯೊಂದರ ಉಪಾಧ್ಯಕ್ಷರಾಗಿರುವ ಜಗದೀಶ್ ಅವರೊಡನೆ  ಹೈದರಾಬಾದಿನ ರಾಡಿಸನ್ ಹೋಟೆಲಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ಇವರ ವಿವಾಹಕ್ಕೆ ಎರಡೂ ಕುಟುಂಬಗಳ ಸಮ್ಮತಿ ಇದೆ.ತಮ್ಮ ಫೇಸ್‍ಬುಕ್ ಖಾತೆಯಲ್ಲಿ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡಿರುವ ನಟಿ ಮದುವೆ ದಿನಾಂಕವನ್ನು ಮಾತ್ರ ಇನ್ನೂ ಬಹಿರಂಗಪಡಿಸಿಲ್ಲ.

"ಆ ದಿನಗಳು" ಮಾತ್ರವಲ್ಲದೆ ಪುನೀತ್ ಅಭಿನಯದ "ಮೈತ್ರಿ" ಚಿತ್ರದಲ್ಲಿ ಸಹ ಮೋಹನ್ ಲಾಲ್ ಅವರ ಪತ್ನಿಯಾಗಿ ಇದೇ ಅರ್ಚನಾ ವೇದ ಅಭಿನಯಿಸಿದ್ದರು.ಅಲ್ಲದೆ ‘ಮಿಂಚು’ ಮತ್ತು ‘ಮೇಘ ವರ್ಷಿಣಿ’ ಸಿನಿಮಾದಲ್ಲಿ ಸಹ ಅರ್ಚನಾ ಪಾತ್ರವಹಿಸಿದ್ದರು. ಟಾಲಿವುಡ್​ನಲ್ಲಿ ನುವ್ವೋಸ್ತಾನಂಟೆ ನೇನೊದ್ದಂಟಾನ ಸಿನಿಮಾದಲ್ಲಿ ಸಿದ್ಧಾರ್ಥ್ ಜತೆ ಕಾಣಿಸಿಕೊಂಡ ನಟಿ ತೆಲುಗು ಬಿಗ್ ಬಾಸ್ ಸೀಸನ್ 1ರಲ್ಲಿ ಅರ್ಚನಾ ಸ್ಪರ್ಧಿಯಾಗಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರಕ್ಕೆ ಅಗ್ನಿ ಪರೀಕ್ಷೆ: ಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಸೂದೆ ಮಂಡನೆ, ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳ ಸಜ್ಜು

ಅಕ್ರಮ ಪಾರ್ಕಿಂಗ್, ಬಹಿರಂಗ ಮೂತ್ರವಿಸರ್ಜನೆ; 'ಯೆಲ್ಲೋ ಸ್ಪಾಟ್' ಆದ ಶೇಷಾದ್ರಿ ರಸ್ತೆ?

ನಮ್ಮ ಮೆಟ್ರೋ ದರ ವಿವಾದ ತಾರಕಕ್ಕೆ: BMRCL ಲೆಕ್ಕಾಚಾರಕ್ಕೆ ಪ್ರಯಾಣಿಕರ ಅಸಮಾಧಾನ, ಶುಲ್ಕ ಪರಿಷ್ಕರಣೆಗೆ ಒತ್ತಾಯ

ಪೋಸ್ಟ್ ಡಿಲೀಟ್ ಮಾಡಲ್ಲ, ಜೈ ಜಗನ್ನಾಥ್- ಜೈ ಹಿಂದ್: BJP ಸಂಸದೆ ಪುತ್ರಿ ಖಡಕ್ ಮಾತು; ವೈರಲ್ ಆದ ಬೆನ್ನಲ್ಲೇ Instagram ನಿಷ್ಕ್ರಿಯ!

CWG 2026: ಗ್ಲಾಸ್ಗೋದಲ್ಲಿ ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ; ದೇಶದಾದ್ಯಂತ ಸಂಭ್ರಮ, ಪ್ರಧಾನಿ ಮೋದಿ ಶ್ಲಾಘನೆ