ಸಿನಿಮಾ ಸುದ್ದಿ

ಎಪಿ ಅರ್ಜುನ್ 'ಕಿಸ್ ' ಗೆ ಮನಸೋತ ಪ್ರೇಕ್ಷಕ: ಭಾಗ-2 ರ ಸುಳಿವು ನೀಡಿದ ನಿರ್ದೇಶಕ

Shilpa D

ಮೂರು ವರ್ಷಗಳ ಕಾಲ ನಿರ್ದೇಶಕ ಎ.ಪಿ. ಅರ್ಜುನ್ ಶ್ರಮವಹಿಸಿ ಸೃಷ್ಟಿಸಿರುವ ಕಿಸ್ ಎಂಬ ದೃಶ್ಯ ಕಾವ್ಯವನ್ನು ಪ್ರೇಕ್ಷಕ ಒಪ್ಪಿಕೊಂಡಿದ್ದಾನೆ, ಹೀಗಾಗಿ ಭಾಗ 1ರ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಕಿಸ್ ಭಾಗ2 ಸಿನಿಮಾಗೆ ನಿರ್ದೇಶಕರು ಸಿದ್ದರಾಗಿದ್ದಾರೆ.

ಸೆಪ್ಟಂಬರ್ 27ರಂದು ರಿಲೀಸ್ ಆಗಿರುವ ಕಿಸ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.  ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಮನಸೋತಿದ್ದೇನೆ, ಇಂದಿನ ಯುವಕರಿಗೆ ಸಿನಿಮಾ ಟೈಟಲ್ ತುಂಬಾ ಸೂಕ್ತವಾಗಿ ಹೊಂದುತ್ತದೆ. 

ಕಿಸ್ ಸಿನಿಮಾದ 2ನೇ ಭಾಗಕ್ಕಾಗಿ ಸಿದ್ಧತೆ ನಡೆಸಿಕೊಳ್ಳುತ್ತಿರುವುದಾಗಿ ಅರ್ಜುನ್ ತಿಳಿಸಿದ್ದಾರೆ. ವಿರಾಟ್ ಶ್ರೀಲೀಲಾ ಅಭಿನಯದ ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ.

SCROLL FOR NEXT