ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಲುಂಗಿ' ತೊಟ್ಟು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅರ್ಜುನ್ ಲೂವಿಸ್, ಅಕ್ಷಿತ್ ಶೆಟ್ಟಿ 

ತುಳು ಭಾಷೆಯ ಚಿತ್ರ 'ಬಸ್ರಾ ಅಂಡ್ ಅರೆ ಮರ್ಲೆ' ನಿರ್ಮಾಪಕ ಮುಕೇಶ್ ಹೆಗ್ಡೆ ಲುಂಗಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ಇಬ್ಬರು ನಿರ್ದೇಶಕರು ಅರ್ಜುನ್ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ.  

ತುಳು ಭಾಷೆಯ ಚಿತ್ರ 'ಬಸ್ರಾ ಅಂಡ್ ಅರೆ ಮರ್ಲೆ' ನಿರ್ಮಾಪಕ ಮುಕೇಶ್ ಹೆಗ್ಡೆ ಲುಂಗಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ಇಬ್ಬರು ನಿರ್ದೇಶಕರು ಅರ್ಜುನ್ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ. 


ಖಾರಾ ಎಂಟರ್ಟೈನ್ ಮೆಂಟ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ದಕ್ಷಿಣ ಕನ್ನಡ ಕರಾವಳಿ ಭಾಗದ ಸೊಗಡು ಇರುತ್ತದೆ. ಕಳೆದ ವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. 


ಕಾಮಿಡಿ, ಸ್ವಲ್ಪ ರೊಮಾನ್ಸ್ ಮತ್ತು ಯುವಕರಿಗೆ ಸಂದೇಶ ಸಾರುವ ವಿಷಯಗಳು ಚಿತ್ರದಲ್ಲಿರುತ್ತದೆ. ಮಂಗಳೂರು ಮೂಲದ ನಟ ಪ್ರಣವ್ ಹೆಗ್ಡೆ ಇದಕ್ಕೆ ನಾಯಕ. ಅಹಲ್ಯಾ ಸುರೇಶ್ ಮತ್ತು ರಾಧಿಕಾ ರಾವ್ ನಾಯಕಿಯರು. ಎಲ್ಲರೂ ಹೊಸಬರೇ. ಇನ್ನೂ ಅನೇಕ ಹೊಸ ಮುಖಗಳು ಚಿತ್ರದಲ್ಲಿರುತ್ತಾರೆ.


ಅರ್ಜುಲ್ ಲೂವಿಸ್ ಇದಕ್ಕೆ ನಿರ್ದೇಶನ ಮಾಡುವುದು ಮಾತ್ರವಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಲುಂಗಿಗೆ ರಿಯೊ ಪಿ ಜಾನ್ ಛಾಯಾಗ್ರಹಣ ಮತ್ತು ಪ್ರಸಾದ್ ಕೆ ಶೆಟ್ಟಿಯವರ ಸಂಗೀತವಿದೆ.


ಅಕ್ಟೋಬರ್ 11ರಂದು ಚಿತ್ರ ತೆರೆಗೆ ಬರಲಿದೆ. ಜಯಣ್ಣ ಕಂಬೈನ್ಸ್ ಇದಕ್ಕೆ ವಿತರಕರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!