ಐ ಲವ್ ಯೂ ಸಿನಿಮಾ ಯಶಸ್ಸಿನ ನಂತರ ನಿರ್ದೇಶಕ ಆರ್ ಚಂದ್ರು ಮತ್ತು ಉಪೇಂದ್ರ ಮತ್ತೆ ಒಟ್ಟಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಐ ಲವ್ ಯೂ ಸಿನಿಮಾ 100 ದಿನದ ಸಂಭ್ರಮಾಚರಣೆಯಲ್ಲಿ ಚಿತ್ರದ ಹೆಸರು ಘೋಷಿಸಲಾಗುವುದು.
ಸೆಪ್ಟಂಬರ್ 14 ರಂದು ಐ ಲವ್ ಯೂ ಸಿನಿಮಾದ 100ನೇ ದಿನದ ಸಂಭ್ರಮಾಚರಣೆ ನಡೆಯಲಿದೆ, ಸೆಪ್ಟಂಬರ್ 18 ರಂದು ನಟ ಉಪೇಂದ್ರ ಅವರ ಹುಟ್ಟುಹಬ್ಬದಂದು ಎಲ್ಲಾ ಮಾಹಿತಿ ಬಹಿರಂಗ ವಾಗಿಸಲಿದ್ದಾರೆ,
ತಮ್ಮ ಮುಂದಿನ ಸಿನಿಮಾದಲ್ಲಿ ಅಂಡರ್ ವರ್ಲ್ಡ್ ಕಥೆ ತರಲಿದ್ದಾರೆ, ಈ ಸಿನಿಮಾ ದಕ್ಷಿಣ ಭಾರತದ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ. 7 ಭಾಷೆಗಳಲ್ಲಿ ಏಕಕಾಲದಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ,
ಈ ಸಂಬಂಧ ಉಪೇಂದ್ರ ಜೊತೆ ಚರ್ಚಿಸಿದ್ದು, ಉಪೇಂದ್ರ ಅವರಿಗಾಗಿ ಕಥೆ ಬರೆಯುತ್ತಿದ್ದಾರೆ. ಎಷ್ಟು ಶೀಘ್ರವೋ ಅಷ್ಟು ಬೇಗ ಶೂಟಿಂಗ್ ಆರಂಭಿಸುವುದಾಗಿ ಚಂದ್ರು ತಿಳಿಸಿದ್ದಾರೆ.