ಪೈಲ್ವಾನ್ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

'ಪೈಲ್ವಾನ್' ಗೆ ಪೈರಸಿ ಕಾಟ: ನಿರ್ಮಾಪಕಿಯಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರ ಬಿಡುಗಡೆಯ ದಿನವೇ ಪೈರಸಿಯಾಗಿತ್ತು ಎಂದು ಆರೋಪಿಸಿ ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ, ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರ ಬಿಡುಗಡೆಯ ದಿನವೇ ಪೈರಸಿಯಾಗಿತ್ತು ಎಂದು ಆರೋಪಿಸಿ ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ, ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ಇದೇ ತಿಂಗಳು 12 ರಂದು ಪಂಚಭಾಷೆಗಳಲ್ಲಿ 'ಪೈಲ್ವಾನ್' ಚಿತ್ರ ಬಿಡುಗಡೆಗೊಂಡಿದ್ದು, 3 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ ಪ್ರತಿಕ್ರಿಯಿಸಿ, ''ಸಾಮಾಜಿಕ ಜಾಲತಾಣದಲ್ಲಿ 'ಪೈಲ್ವಾನ್' ಚಿತ್ರವನ್ನು ಕಿಡಿಗೇಡಿಗಳು ಪೈರಸಿ ಮಾಡಿ ಹರಿಬಿಡಲಾಗಿದೆ ಎಂದು ಇಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3500 ಕ್ಕೂ ಹೆಚ್ಚು ಲಿಂಕ್ ಗಳನ್ನು ಹಂಚಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದೇನೆ ಎಂದರು.

ಹಾಗೆಯೇ ಚಿತ್ರವನ್ನು ಪೈರಸಿ ಮಾಡಿರುವುದು ದರ್ಶನ್ ಅಭಿಮಾನಿಗಳಲ್ಲ. ಆದರೆ ಕಿಡಿಗೇಡಿಗಳಿಂದ ಪೈರಸಿ ಆಗಿದೆ. ಪೈರಸಿ ಯಾರೇ ಮಾಡಿದರೆ ಅದು ತಪ್ಪು. ಇದು ಚಿತ್ರೋದ್ಯಮದ ಬೆಳವಣಿಗೆಗೆ ಮಾರಕ ಎಂದು ಅವರು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel