ಕಿಸ್ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಕಿಸ್' ಪ್ರೀತಿಯನ್ನು ವ್ಯಕ್ತಪಡಿಸುವ ಪರಿಶುದ್ಧ ರೂಪ: ವಿರಾಟ್ 

ಎಪಿ ಅರ್ಜುನ್ ನಿರ್ದೇಶನದ 'ಕಿಸ್ ' ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ವಿರಾಟ್ ಅಭಿನಯಿಸುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಹಿನ್ನಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ನೊಂದಿಗೆ ತಮ್ಮ ಅನುಭವಗಳನ್ನು ವಿರಾಟ್  ಹಂಚಿಕೊಂಡಿದ್ದಾರೆ.

ಎಪಿ ಅರ್ಜುನ್ ನಿರ್ದೇಶನದ 'ಕಿಸ್ ' ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ವಿರಾಟ್ ಅಭಿನಯಿಸುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಹಿನ್ನಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ನೊಂದಿಗೆ ತಮ್ಮ ಅನುಭವಗಳನ್ನು ವಿರಾಟ್  ಹಂಚಿಕೊಂಡಿದ್ದಾರೆ.

ವಿರಾಟ್ ಅರ್ಜುನ್ ಅವರ ದೊಡ್ಡ ಅಭಿಮಾನಿಯಂತೆ.ಜೊತೆ ಜೊತೆಯಲ್ಲಿ ಧಾರವಾಹಿ ಪೂರ್ಣಗೊಳಿಸಿದ ಬಳಿಕ ಬೆಳ್ಳಿ ಪರದೆಯಲ್ಲಿ ಅದೃಷ್ಟ ಪರೀಕ್ಷೆಗಾಗಿ ಅವಕಾಶಕ್ಕಾಗಿ ಹುಡುಕಾಟ ನಡೆಸಿದ್ದರಂತೆ. 

ಸ್ಯಾಂಡಲ್ ವುಡ್  ಬಗ್ಗೆ ಹೆಚ್ಚಾಗಿ ಗೊತ್ತಿರದ ವಿರಾಟ್,ಅದ್ದೂರಿ ಸಿನಿಮಾ ನಿರ್ದೇಶಕರನ್ನು ಭೇಟಿ ಮಾಡಲು ಸಾಕಷ್ಟು ಪ್ರಯತ್ನಿಸಿದ್ದು,ಕೊನೆಗೆ ಅರ್ಜುನ್ ಸಿಗದೆ ಹೋಗದೆ ಅವರ ಅಮ್ಮನ ಗಮನಕ್ಕೆ ತಂದಿದ್ದಾರೆ.ಅರ್ಜುನ್  ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ.

ವಿರಾಟ್ ಅವರ ಧಾರವಾಹಿಯನ್ನು ವೀಕ್ಷಿಸಿದ್ದ ಅರ್ಜುನ್ ತಾಯಿ, ಒಂದು ದಿನ ಅರ್ಜುನ್ ಅವರನ್ನು ಭೇಟಿ ಮಾಡಿಸಿದ್ದಾರೆ. ನಂತರ ಅಡಿಷನ್ ನಲ್ಲಿ 200 ಮಂದಿಯಲ್ಲಿ ತಾವು ಆಯ್ಕೆಯಾಗಿದ್ದಾಗಿ ವಿರಾಟ್ ತಿಳಿಸಿದ್ದಾರೆ.

ಕಿಸ್ , ಪ್ರೀತಿಯ ಆಹ್ವಾನವಾಗಿ ಮತ್ತು ಭಾವನೆಯ ಅಭಿವ್ಯಕ್ತಿಯ ಶುದ್ಧ ರೂಪ.“ಒಬ್ಬ ಹುಡುಗನು ಹುಡುಗಿಯನ್ನು ಹಿಡಿದು ಅವಳ ಹಣೆಯ ಮೇಲೆ ಮುತ್ತಿಟ್ಟರೆ, ಅವನು‘ ನಾನು ನಿಮ್ಮ ರಕ್ಷಕ ’ಎಂಬ ಭಾವನೆ ವ್ಯಕ್ತಪಡಿಸುವುದಾಗಿದೆ .ಕಿಸ್ ಹುಡುಗ ಮತ್ತು ಹುಡುಗಿಗೆ ಸೀಮಿತವಾಗಿಲ್ಲ,ಪೋಷಕರು ಮತ್ತು ಮಕ್ಕಳು,ಸಹೋದರ ಮತ್ತು ಸಹೋದರಿ, ಗಂಡ ಮತ್ತು ಹೆಂಡತಿ ಅಥವಾ ಇತರ ಸಂಬಂಧಗಳಿಂದಲೂ ಕಿಸ್ ಮೂಲಕ ಪ್ರೀತಿಯನ್ನು  ವ್ಯಕ್ತಪಡಿಸಬಹುದು ಎನ್ನುತ್ತಾರೆ ವಿರಾಟ್.

ಹುಡುಗಿಯ ಹೃದಯವನ್ನು ಗೆಲ್ಲಲು ಹುಡುಗ ಹೇಗೆ ವಿಪರೀತ ಮಟ್ಟಕ್ಕೆ ಹೋಗುತ್ತಾನೆ ಎಂಬುದನ್ನು ಕಿಸ್‌ನಲ್ಲಿ ವಿವರಿಸಲಾಗಿದೆ ಎಂದು ವಿರಾಟ್ ಹೇಳುತ್ತಾರೆ. 35 ನಾಟಕಗಳಲ್ಲಿ ಅಭಿನಯಿಸಿರುವ ವಿರಾಟ್ , ನಟನೆಗಾಗಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದಾರೆ. ನಂತರ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದು, ಇದೀಗ ಬೆಳ್ಳಿ ಪರದೆ ಮುಂದೆ ಬರುತ್ತಿದ್ದಾರೆ. 

ಕಿಸ್ ಚಿತ್ರಕ್ಕೆ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿದ್ದರೆ ರವಿವರ್ಮಾ ಸಾಹಸ ಸಂಯೋಜಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT