ಸುರ್ವೀನ್ ಚಾವ್ಲಾ 
ಸಿನಿಮಾ ಸುದ್ದಿ

ನಿರ್ದೇಶಕರು ನನ್ನ ಕ್ಲೀವೇಜ್, ತೊಡೆ ನೋಡಲು ಬಯಸುತ್ತಿದ್ದರು: ನಟಿ ಸುರ್ವೀನ್ ಚಾವ್ಲಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನ್‍ವಾಲಾ' ಹಾಗೂ ಅರ್ಜುನ್ ಸರ್ಜಾ ಅಭಿನಯದ 'ಅಭಿಮನ್ಯು' ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಅವರು ಮತ್ತೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು,..

ಮುಂಬೈ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನ್‍ವಾಲಾ' ಹಾಗೂ ಅರ್ಜುನ್ ಸರ್ಜಾ ಅಭಿನಯದ 'ಅಭಿಮನ್ಯು' ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಅವರು ಮತ್ತೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು, ನಿರ್ದೇಶಕರು ನನ್ನ ಕ್ಲೀವೇಜ್ ಮತ್ತು ತೊಡೆ ನೋಡಲು ಬಯಸುತ್ತಿದ್ದರು ಎಂದು ಹೇಳಿದ್ದಾರೆ.

'ಕಹಿನ್ ಟು ಹೋಗಾ' ಟಿವಿ ಕಾರ್ಯಕ್ರಮದ ಮೂಲಕ ನಟನಾ ವೃತ್ತಿ ಆರಂಭಿಸಿದ ಸುರ್ವೀನ್ ಚಾವ್ಲಾ ಅವರು  ಬಾಲಿವುಡ್ ಹಾಗೂ ದಕ್ಷಿಣ ಭಾರತದ ಕನ್ನಡ, ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ಹೇಟ್ ಸ್ಟೋರಿ 2 ಚಿತ್ರದ ನಾಯಕಿಗೆ ಒಟ್ಟು ಐದು ಬಾರಿ ಕ್ಯಾಸ್ಟಿಂಗ್ ಕೌಚ್ ಅನುಭವವಾಗಿದ್ದು, ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಮೂರು ಬಾರಿ ಹಾಗೂ ಬಾಲಿವುಡ್ ನಲ್ಲಿ ಎರಡು ಬಾರಿ ಅಂತಹ ಕೆಟ್ಟ ಅನುಭವವಾಗಿದೆ. ಆದರೆ ನಾನದನ್ನು ನಿರಾಕರಿಸಿದೆ ಎಂದು ನಟಿ ಹೇಳಿದ್ದಾರೆ.

ಒಬ್ಬ ನಿರ್ದೇಶಕ ನನ್ನ ಕ್ಲೀವೇಜ್ ಹೇಗೆ ಕಾಣುತ್ತಿದೆ ಎಂದು ನೋಡಲು ಬಯಸಿದರೆ ಮತ್ತೊಬ್ಬ ನಿರ್ದೇಶಕ ನನ್ನ ತೊಡೆ ಹೇಗೆ ಕಾಣಿಸುತ್ತಿವೆ ಎಂದು ನೋಡಲು ಬಯಸುತ್ತಿದ್ದರು ಎಂದು ಸುರ್ವೀನ್ ಚಾವ್ಲಾ ಅವರು ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಒಂದು ಬಾರಿ ನಾನು ಆಡಿಷನ್ ಗೆ ಹೋಗಿದ್ದಾಗ, ವ್ಯಕ್ತಿಯೊಬ್ಬರು ನನ್ನ ತೂಕ ಹೆಚ್ಚಾಗಿದೆ ಎಂದು ಹೇಳಿದ್ದರು. ಆದರೆ ನನ್ನ ತೂಕ ಕೇವಲ 56 ಕೆಜಿ ಇತ್ತು. ಆ ವ್ಯಕ್ತಿಗೆ ಕನ್ನಡಕದ ಅಗತ್ಯ ಇತ್ತು ಅಂತ ಕಾಣಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

ಸುರ್ವೀನ್ ಚಾವ್ಲಾ ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು. ಆದರೆ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಮಾತ್ರ ಅದನ್ನು ಎದುರಿಸಿದ್ದೇನೆ ಎಂದಿದ್ದರು. ಈಗ ದಕ್ಷಿಣ ಭಾರತ ಮತ್ತು ಬಾಲಿವುಡ್ ಎರಡರಲ್ಲೂ ಕಾಸ್ಟಿಂಗ್ ಕೌಚ್ ಇದೆ ಎನ್ನುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT