ಸಿನಿಮಾ ಸುದ್ದಿ

ಅಗತ್ಯ ಮುನ್ನೆಚ್ಚರಿಕೆಯೊಡನೆ ಸಿನಿ ಪ್ರದರ್ಶನ ಮುಂದುವರಿಯಲಿ: 'ಕಬ್ಜ' ನಿರ್ದೇಶಕ ಆರ್. ಚಂದ್ರು

Raghavendra Adiga

ಕೋವಿಡ್-19 ಲಾಕ್‌ಡೌನ್ ಸಿನಿಮಾ ಶೂಟಿಂಗ್ ಅನ್ನು ಸ್ಥಗಿತಗೊಳಿಸಿರಬಹುದು ಆದರೆ ಆರ್ ಚಂದ್ರು ಅವರ ಕೆಲಸ ನಿಂತಿಲ್ಲ. ಪ್ರಸ್ತುತ ಉಪೇಂದ್ರ ಅಭಿನಯದ ಕಬ್ಜ ನಿರ್ದೇಶನದಲ್ಲಿರುವ ಚಂದ್ರು ಅಗತ್ಯ ಮುನ್ನೆಚ್ಚರಿಕೆಗಳೊಡನೆ ಸಿನಿ ಪ್ರದರ್ಶನ ಮುಂದುವರಿಯಬೇಕು ಎಂದು ಅಭಿಪ್ರಾಯಪಡುತ್ತಾರೆ.

ಕಬ್ಜ-  ಆಕ್ಷನ್-ಡ್ರಾಮಾ, 1980 ರ ದಶಕದ ಕಥಾನಕವಾಗಿದ್ದು ಭೂಗತ ಲೋಕದ ಥೀಮ್ ಹೊಂದಿದೆ. ಈ ಚಿತ್ರವು ಏಳು ಭಾಷೆಗಳಲ್ಲಿ ಹೊರಬರಲಿದೆ. ಇದನ್ನು ಕನ್ನಡ ಮತ್ತು ತೆಲುಗಿನಲ್ಲಿ  ಈಗಾಗಲೇ ತಯಾರಿಸಲಾಗಿದ್ದು  ತಮಿಳು, ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. 

"ಎಡಿಟಿಂಗ್  ಹೊರತಾಗಿ, ನಾನು ಟ್ರೈಲರ್ ಮತ್ತು ಚಿತ್ರದ ಟೀಸರ್ ಸಹ ಸಿದ್ಧಪಡಿಸಿದ್ದೇನೆ"  ಇತರ ಭಾಷೆಗಳಲ್ಲಿ ಸಂಭಾಷಣೆ ಕೆಲಸ ಮಾಡಿರುವ ಹೇಳುತ್ತಾರೆ. ಇವೆಲ್ಲವನ್ನೂ ಆನ್‌ಲೈನ್‌ನಲ್ಲಿ ಮಾಡಲಾಗಿದೆ. “ಅದೃಷ್ಟವಶಾತ್, ನನ್ನ ನಿವಾಸ ಮತ್ತು ಕಚೇರಿ ಒಂದೇ ಕಟ್ಟಡದಲ್ಲಿವೆ. ನಾನು ನಿರ್ದೇಶಕರ ತಂಡದಲ್ಲಿರುವ 15 ಸಹವರ್ತಿಗಳನ್ನು ಹೊಂದಿದ್ದೇನೆ ಮತ್ತು ನಾವು ನಿಯಮಿತವಾಗಿ ಬೆಳಿಗ್ಗೆ 7 ಗಂಟೆಗೆ  ಕೆಲಸ ಪ್ರಾರಂಭಿಸುತ್ತೇವೆ. ಇಂದಿನ ದಿನಗಳಲ್ಲಿಯೂ ನಾನು ಅದೇ ರೀತಿ ಕೆಲಸ ಮುಂದುವರಿಸಿದ್ದೇನೆ.. ಆದರೆ ಶುಟಿಂಗ್ ಸೆಟ್ ಗಳಲ್ಲಿ ಅಲ್ಲ.ಬದಲಿಗೆ  ನಾವು ಆನ್‌ಲೈನ್‌ಗೆ ಬಂದು ದಿನನಿತ್ಯ ಆಯಾ ದಿನ ನಾವೇನು ಮಾಡಬೇಕು ಎನ್ನುವುದನ್ನು ಚರ್ಚಿಸುತ್ತೇವೆ ಎಂದು ಚಂದ್ರು ಹೇಳಿದ್ದಾರೆ.

ಇನ್ನು ನಿರ್ದೇಶಕ ಉಪೇಂದ್ರ ಅವರೊಡನೆ ಸಹ ನಿಯಮಿತ ಸಂಪರ್ಕದಲ್ಲಿದ್ದಾರೆ. ಚಿತ್ರದ ಪ್ರಗತಿಯ ಬಗ್ಗೆ ಅವರೊಡನೆ ಚರ್ಚಿಸುತ್ತಾರೆ."ನಾವು ಮಿನರ್ವ ಮಿಲ್ಸ್ ನಲ್ಲಿ ದೊಡ್ಡ ವೆಚ್ಚದಲ್ಲಿ ಸ್ಥಾಪಿಸಲಾದ ದೊಡ್ಡ ಜೈಲಿನ ಸೆಟ್ಟಿನೊಂದಿಗೆ ಶೂಟಿಂಗ್ ನಡೆಸುತ್ತೇವೆ.ನಾವು ಸರ್ಕಾರದಿಂದ ಅನುಮತಿ ಪಡೆದಾಗ ಮತ್ತು ಜೈಲಿನಸೆಟ್ಟಿನೊಂದಿಗೆ ಶೂಟಿಂಗ್ ಮುಂದುವರಿಸುತ್ತೇವೆ." ಅವರು ಹೇಳಿದ್ದಾರೆ.ಸಿದ್ಧೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದು ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್ ಸಾಕಷ್ಟು ವೈರಲ್ ಆಗಿದೆ.

“ಇದು ದೊಡ್ಡ ಬಜೆಟ್ ಚಿತ್ರವಾದ್ದರಿಂದ, ಕಿರಿಯ ಕಲಾವಿದರು ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಕನಿಷ್ಠ 300 ರಿಂದ 500 ಜನರನ್ನು ನಾವು ಹೊಂದಿದ್ದೇವೆ. ಆದ್ದರಿಂದ, ನಾವು ಪ್ರತಿದಿನ ಇಡೀ ಪ್ಳೋರ್ ಅನ್ನು ಸ್ವಚ್ಚಗೊಳಿಸಲು  ನಿರ್ಧರಿಸಿದ್ದೇವೆ, ಜೊತೆಗೆ ಶೂಟಿಂಗ್‌ಗೆ ತರಲಾಗುವ ಉಪಕರಣಗಳು ಶುಚಿಯಾಗಿರಲಿದೆ.ನಾವು  ಶೂತಿಂಗ್ ಸಿಬ್ಬಂದಿಗಳ ಹೊರತುಇತರರಿಗೆ ಪ್ರವೇಶ ನಿರ್ಬಂಧಿಸಿದ್ದೇವೆ. ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ.

ಏತನ್ಮಧ್ಯೆ ಕಬ್ಜಗೆ ನಾಯಕಿಯ ಆಯ್ಕೆಯಾಗಿಲ್ಲ.  ಚಿತ್ರದಲ್ಲಿ ಕಬೀರ್ ದುಹಾನ್ ಸಿಂಗ್, ಕೋಟಾ ಶ್ರೀನಿವಾಸ್ ರಾವ್, ಜಯ ಪ್ರಕಾಶ್, ಕಾಟ್ ರಾಜು, ಸುಬ್ಬರಾಜು, ಅವಿನಾಶ್, ಮತ್ತು ಎಂ ಕಾಮರಾಜ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತವಿದೆ. ಅರ್ಜುನ್ ಶೆಟ್ಟಿ ಛಾಯಾಗ್ರಹಣ ನೆರವೇರಿಸಿದ್ದಾರೆ..
 

SCROLL FOR NEXT