ವಿಕ್ರಮ್ ರವಿಚಂದ್ರನ್ 
ಸಿನಿಮಾ ಸುದ್ದಿ

ಹೊಸತನದ ಸಿನಿಮಾಗಳಲ್ಲಿ ನಟಿಸುವಾಸೆ: ವಿಕ್ರಮ್ ರವಿಚಂದ್ರನ್!

ತ್ರಿವಿಕ್ರಮ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿರುವ ಕ್ರೆಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಮೇಲೆ ಸಿನಿ ಪ್ರಿಯರ ಕಣ್ಣು ನೆಟ್ಟಿದೆ. 

ಬೆಂಗಳೂರು: ತ್ರಿವಿಕ್ರಮ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿರುವ ಕ್ರೆಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಮೇಲೆ ಸಿನಿ ಪ್ರಿಯರ ಕಣ್ಣು ನೆಟ್ಟಿದೆ. 

ಪ್ರಸ್ತುತ ಲಾಕ್ ಡೌನ್ ಸಮಯವನ್ನು ಎರಡನೇ ಸಿನಿಮಾ ಅಂತಿಮಗೊಳಿಸುವಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಮಾತುಕತೆಗಳು ನಡೆಯುತ್ತಿವೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.ತೆಲುಗು ನಿರ್ಮಾಪಕರು ಸೇರಿದಂತೆ ಹಲವು ಮಂದಿ ನಿರ್ದೇಶಕರು ಸಿನಿಮಾ ಮಾಡಲು ಕೇಳಿಕೊಂಡಿದ್ದಾರೆ.ಕಥೆಯನ್ನು ಓದುತ್ತಿದ್ದೇನೆ. ಅದರಲ್ಲಿ ಒಂದನ್ನು ಅಂತಿಮಗೊಳಿಸುತ್ತೇನೆ. ಆದರೆ, ಕೋವಿಡ್-19 ಲಾಕ್ ಡೌನ್ ನಿಂದಾಗಿ ಇಡೀ ಯೋಜನೆ ಮುಂದಕ್ಕೆ ಹೋಗಿದೆ ಎಂದು ವಿಕ್ರಮ್ ರವಿಚಂದ್ರನ್ ಹೇಳಿದ್ದಾರೆ.

ತ್ರಿವಿಕ್ರಮ ಟ್ರೈಲರ್ ನೊಂದಿಗೆ ನನ್ನ ಎರಡನೇ ಸಿನಿಮಾ ಘೋಷಿಸುವ ವಿಶ್ವಾಸವಿದೆ. ಆದರೆ. ಸರಿಯಾದ ವೇಳೆಯಲ್ಲಿ ಅದನ್ನು ಮಾಡುತ್ತೇನೆ ಎಂದು ವಿಕ್ರಮ್ ರವಿಚಂದ್ರನ್ ತಿಳಿಸಿದ್ದಾರೆ. 

ತ್ರಿವಿಕ್ರಮ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ವಿಕ್ರಮ್ ಪೂರ್ಣಗೊಳಿಸಿದ್ದು, ಎರಡು ಹಾಡುಗಳು ಬಾಕಿ ಉಳಿದಿವೆ.ಲಾಕ್ ಡೌನ್ ಸಂದರ್ಭವನ್ನು ಎರಡನೇ ಸಿನಿಮಾಗೆ ಹೇಗೆ ಮುಂದುವರೆಯಬೇಕೆಂಬ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸತನದ ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿದ್ದು, ರವಿಚಂದ್ರನ್ ಮಗನಾಗಿ ಕನ್ನಡ ಚಿತ್ರರಂಗಕ್ಕೆ ಹೊಸದನ್ನು ತರುವ ನಿಟ್ಟಿನಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. 

ನಿರ್ದಿಷ್ಟ ಪಾತ್ರಕ್ಕೆ ತಕ್ಕಂತೆ ಕಥೆ ಇರುವುದನ್ನು ಬಯಸುತ್ತೇನೆ. ವಿಭಿನ್ನತೆಯಿಂದ ಮಾನ್ಯತೆ ದೊರೆಯಲಿದೆ. ಆದರೆ,  ನನ್ನ ಸ್ವಂತ ಶ್ರಮದಿಂದ ಬೆಳೆಯಬೇಕಾದ ಅಗತ್ಯವಿದೆ ಎನ್ನುವ ವಿಕ್ರಮ್, ಕೊರೋನಾವೈರಸ್ ನಂತರ ಚಿತ್ರರಂಗದ ಭವಿಷ್ಯ ಏನಾಗಲಿದೆ ಎಂಬುದನ್ನು ಊಹಿಸಲು ಅಸಾಧ್ಯ, ಎಲ್ಲಾವೂ ವೀಕ್ಷಕರು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ಆಧರಿಸಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT