ತಾನ್ಯಾ ಹೋಪೆ 
ಸಿನಿಮಾ ಸುದ್ದಿ

ಆಗಸ್ಟ್ 15 ರಂದು ತಾನ್ಯಾ ಹೋಪೆ ನಟನೆಯ ಆಲ್ಬಂ ರಿಲೀಸ್

ಅರ್ಜುನ್ ರಾಜ್ ನಿರ್ದೇಶನದ ಸಿಂಗಲ್ ಮ್ಯೂಸಿಕ್ ಆಲ್ಬಂ ನಲ್ಲಿ ನಟಿ ತಾನ್ಯಾ ಹೋಪೆ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಜ್ ನಿರ್ದೇಶನದ ಚೊಚ್ಚಲ ಹಾಡು ಇದಾಗಿದೆ, ಎಲ್ಲಾ ವೃತ್ತಿಪರರ ವೇದಿಕೆ ಗೀತೆ ಇದಾಗಿದ್ದು, ಆಗಸ್ಟ್ 15 ರಂದು ಸಾಂಗ್ ರಿಲೀಸ್ ಆಗಲಿದೆ.

ಅರ್ಜುನ್ ರಾಜ್ ನಿರ್ದೇಶನದ ಸಿಂಗಲ್ ಮ್ಯೂಸಿಕ್ ಆಲ್ಬಂ ನಲ್ಲಿ ನಟಿ ತಾನ್ಯಾ ಹೋಪೆ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಜ್ ನಿರ್ದೇಶನದ ಚೊಚ್ಚಲ ಹಾಡು ಇದಾಗಿದೆ, ಎಲ್ಲಾ ವೃತ್ತಿಪರರ ವೇದಿಕೆ ಗೀತೆ ಇದಾಗಿದ್ದು, ಆಗಸ್ಟ್ 15 ರಂದು ಸಾಂಗ್ ರಿಲೀಸ್ ಆಗಲಿದೆ.

ಈ ಮೊದಲು ತಾನ್ಯಾ ಹೋಪೆ ಮಾರಮ್ಮನ್ ಡಿಸ್ಕೋ ಗೆ ಸಂಗೀತ ನೀಡಿದ್ದ ಬಾಸಿಕ್ಸ್  ಈ ಸಾಂಗ್ ಗೆ ಸಂಗೀತ ನೀಡಿದ್ದಾರೆ. ಮಾರಮ್ಮನ್ ಡಿಸ್ಕೋ ತಾಂಡವ್ ಮೀಡಿಯಾ ಟೀಮ್ ಸಾಂಗ್ ಇದಾಗಿತ್ತು. ಜೊತೆಗೆ ಇದು ತಾನ್ಯಾ ಅವರ 2ನೇ ರ್ಯಾಪರ್ ಸಾಂಗ್ ಆಗಿದೆ. ಪ್ರವೀಣ್ ಆರ್ಯ ನೃತ್ಯ  ಸಂಯೋಜನೆಯಿದೆ,

ಮೂರು ಭಾಷೆಗಳಲ್ಲಿ ಹಾಡು ತಯಾರಾಗಿದ್ದು, ಕನ್ನಡದಲ್ಲಿ ಶ್ರೇಣಿಕ್, ತೆಲುಗಿನಲ್ಲಿ ಪ್ರಣವ್ ಚಾಗಂತಿ ಮತ್ತು ತಮಿಳಿನಲ್ಲಿ ಸೌಂದರ್ಯ ಬಾಲಾ ಹಾಡಿದ್ದಾರೆ. ಸುಹಾಸ್ ಸಪ್ತಗಿರಿ ಸಿನಿಮಾಟೋಗ್ರಫಿ ಇದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಕಲಾವಿದರು ವೇದಿಕೆಯಲ್ಲಿ ನಟಿಸುವ ಅವಕಾಶ ಕಳೆದುಕೊಂಡಿದ್ದಾರೆ, ಪ್ರಸಕ್ತ ಸನ್ನಿವೇಶದಲ್ಲಿ ಮತ್ತೆ ನಾವೆಲ್ಲರೂ ಹೇಗೆ ಸೇರಿಕೊಳ್ಳುತ್ತೇವೆ ಮತ್ತು ನಮ್ಮ ವೇದಿಕೆಯನ್ನು ಹೇಗೆ ರಚಿಸುತ್ತೇವೆ ಎಂಬುದು ಹಾಡಿನ ವಿಷಯವಾಗಿದೆ ಎಂದು ತಾನ್ಯಾ ಹೇಳಿದ್ದಾರೆ.

ಡ್ಯಾನ್ಸ್ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ತಾನ್ಯಾ ಎಲ್ಲಾ ಸಮಯದಲ್ಲೂ ನೃತ್ಯ ಅಭ್ಯಾಸ ಮಾಡುತ್ತಿರುತ್ತಾರಂತೆ ,ಈ ಹಾಡಿನಲ್ಲಿ ತಮ್ಮ ಎಲ್ಲಾ ಪ್ರತಿಭೆ ಹೊರ ಹಾಕಲು ರೆಡಿಯಾಗಿದ್ದಾರೆ.

ನನಗೆ ಆಯಾಸವಾಗಿಯೇ ಇಲ್ಲ, ಪ್ರತಿಸಲ ನಾನು ಡ್ಯಾನ್ಸ್ ಮಾಡುವಾಗ ಯಾವ ಸ್ಟೆಪ್ ಮಾಡಿದ್ದೇನೆ, ಯಾವುದನ್ನು ಮಾಡಿಲ್ಲ ಎಂಬುದು ನನಗೆ ತಿಳಿಯುತ್ತದೆ, ಇದೊಂದು ಥೀಮ್ ಸಾಂಗ್ ಆಗಿರುವ ಕಾರಣದಿಂದ ನಾನು ಈ ಹಾಡಿನಲ್ಲಿ ನಟಿಸಿದ್ದೇನೆ, ಥೀಮ್ ಸಾಂಗ್ ನನಗೆ ಬಹಳ ಇಷ್ಟ, ಹಾಗಾಗಿ ಡ್ಯಾನ್ಸ್ ಮಾಡಿದ್ದೇನೆ, ಎಲ್ಲಾ ರೀತಿಯ ಮುಂಜಾಗರೂಕಾ ಕ್ರಮ ತೆಗೆದುಕೊಂಡು ಶೂಟಿಂಗ್ ನಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ.

ದರ್ಶನ್ ನಟನೆಯ ಯಜಮಾನ ಸಿನಿಮಾದ ಫೇಮಸ್ ಹಾಡು ಬಸಣ್ಣಿ ಬಾ ಮೂಲಕ ತಾನ್ಯಾ ಮನೆ ಮಾತಾಗಿದ್ದಾರೆ. ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ಸಿನಿಮಾದಲ್ಲೂ ಕೂಡ ತಾನ್ಯಾ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT