ಸುದೀಪ್ 
ಸಿನಿಮಾ ಸುದ್ದಿ

'ವಿಕ್ರಾಂತ್ ರೋಣಾ' ಗತ್ತು, ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗಮ್ಮತ್ತು!

‘ಫ್ಯಾಂಟಮ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ.

ಬೆಂಗಳೂರು: ‘ಫ್ಯಾಂಟಮ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ.

ನಿರ್ದೇಶಕ ಅನೂಪ್ ಭಂಡಾರಿ ಅಭಿಮಾನಿಗಳಿಗೆ ನೀಡಿದ್ದ ಭರವಸೆ ಈಡೇರಿಸಿದ್ದು, ಆಗಸ್ಟ್ 10 ರಂದು ಸರಿಯಾಗಿ 10 ಗಂಟೆಗೆ ಕಿಚ್ಚ ಸುದೀಪ್ ಅವರ ವಿಕ್ರಾಂತ್‌ ರೋಣಾ ಪಾತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಗೊಳಿಸಿದ್ದಾರೆ. 

ಪೋಸ್ಟರ್ ಕಂಡ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ತಲೆ ಬುರುಡೆ ಆಕಾರದಲ್ಲಿ ಇರುವ ಸಿಂಹಾಸನದ ಮೇಲೆ ಕುಳಿತಿರುವ ಸುದೀಪ್‌ ಅವರು ಗನ್‌ ಹಿಡಿದು ಖಡಕ್‌ ಪೋಸ್‌ ನೀಡಿದ್ದಾರೆ.

ಇದರ ಜೊತೆಗೆ ವಿಕ್ರಾಂತ್‌ ರೋಣಾ ಪಾತ್ರದ ಬಗ್ಗೆಯೂ ನಿರ್ದೇಶಕ ಅನೂಪ್‌ ಭಂಡಾರಿ ಕಿರು ಪರಿಚಯ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿಯೇ ಒಂದು ವಿಡಿಯೋ ಹಂಚಿಕೊಂಡಿಕೊಂಡಿರುವ ಅವರು, 'ಫ್ಯಾಂಟಮ್‌ ಚಿತ್ರದ ಮುಖ್ಯ ಪಾತ್ರ ವಿಕ್ರಾಂತ್‌ ರೋಣಾ. ಆ ಹೆಸರಿನಲ್ಲಿ ಎಷ್ಟು ಪವರ್‌ ಇದೆಯೋ ಆ ಪಾತ್ರ ಕೂಡ ಅಷ್ಟೇ ಪವರ್‌ಫುಲ್‌. ಅವನು ಏನ್‌ ಮಾಡ್ತಾನೆ, ಯಾಕೆ ಮಾಡ್ತಾನೆ, ಹೇಗೆ ಮಾಡ್ತಾನೆ ಅನ್ನೋದು ಯಾರಿಗೂ ಅರ್ಥ ಆಗೋದೇ ಇಲ್ಲ. ಆದರೆ ಅವನು ಏನೇ ಮಾಡಿದರೂ ಅದಕ್ಕೊಂದು ಕಾರಣ ಇರುತ್ತೆ' ಎಂದಿದ್ದಾರೆ.

ಕೊರೋನಾ ನಿಯಮಾವಳಿಗಳನ್ನು ಅಳವಡಿಸಿಕೊಂಡು, ಫ್ಯಾಂಟಮ್ ಸಿನಿಮಾದ ಚಿತ್ರೀಕರಣದ ಹೈದರಾಬಾದ್‌ನಲ್ಲಿ ನಡೆಸಲಾಗುತ್ತಿದೆ. ಜಾಕ್‌ ಮಂಜು ನಿರ್ಮಾಣದ ಈ ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣ, ಅಜನೀಶ್‌ ಲೋಕನಾಥ್ ಸಂಗೀತ ನಿರ್ದೇಶನವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT