ನಿರಂಜನ್ ಸುಧೀಂದ್ರ 
ಸಿನಿಮಾ ಸುದ್ದಿ

ಡ್ಯಾನ್ಸರ್ ಪಾತ್ರದ ಮೂಲಕ ಬೆಳ್ಳಿತೆರೆಗೆ ನಿರಂಜನ್ ಸುಧೀಂದ್ರ ಪಾದಾರ್ಪಣೆ

ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರ ಉಪೇಂದ್ರ ಅವರ ನಿರ್ದೇಶನದ ಎ, ಉಪೇಂದ್ರ, ಸೂಪರ್ ಅಥವಾ ಉಪ್ಪಿ 2 ಚಿತ್ರಗಳ ಶೀರ್ಷಿಕೆಯನ್ನೇ ಹೊಂದಿರಲಿದ್ದು ಈ ಬಗ್ಗೆ ನಾಡಿದ್ದು ಶುಕ್ರವಾರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರ ಉಪೇಂದ್ರ ಅವರ ನಿರ್ದೇಶನದ ಎ, ಉಪೇಂದ್ರ, ಸೂಪರ್ ಅಥವಾ ಉಪ್ಪಿ 2 ಚಿತ್ರಗಳ ಶೀರ್ಷಿಕೆಯನ್ನೇ ಹೊಂದಿರಲಿದ್ದು ಈ ಬಗ್ಗೆ ನಾಡಿದ್ದು ಶುಕ್ರವಾರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಉಪೇಂದ್ರ ಅವರ ಅಳಿಯ ನಿರಂಜನ ಸುದೀಂಧ್ರ ಈ ಚಿತ್ರದಲ್ಲಿ ರಮೇಶ್ ವೆಂಕಟೇಶ್ ಬಾಬುಗೆ ಜೊತೆಯಾಗಲಿದ್ದಾರೆ. ಸದ್ಯಕ್ಕೆ ಅದ್ದೂರಿ 2 ಚಿತ್ರದ ಕೆಲಸ ನಿಂತಿದೆ. ಅದರ ಬದಲಿಗೆ ನಿರ್ದೇಶಕರು ಮತ್ತೊಂದು ಕಮರ್ಷಿಯಲ್ ಚಿತ್ರದೊಂದಿಗೆ ಬರಲಿದ್ದಾರೆ.

ಪ್ರಿಯಾಂಕ ಉಪೇಂದ್ರ ಅವರೊಂದಿಗೆ ಸೆಕೆಂಡ್ ಹಾಫ್ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ನಿರಂಜನ್ ಇದೀಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಸಿನಿ ಎಕ್ಸ್ ಪ್ರೆಸ್ ಗೆ ಈ ಸ್ಟಿಲ್ ಲಭ್ಯವಾಗಿದ್ದು ಇದರ ಕೆಲಸ ಸದ್ದಿಲ್ಲದೆ ಕಳೆದ ಜುಲೈ 18ರಿಂದ ಆರಂಭವಾಗಿ ಈಗಾಗಲೇ 20 ದಿನದ ಶೂಟಿಂಗ್ ಮುಗಿದಿದೆ.

ನಾಡಿದ್ದು 14ರಂದು ಉಪೇಂದ್ರ ಮತ್ತು ಪ್ರಿಯಾಂಕಾ ಅವರು ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಅದರ ನಂತರ ಆಗಸ್ಟ್ 20ರಂದು ಟೀಸರ್ ಬಿಡುಗಡೆಯಾಗಲಿದೆ. ಅಂದು ನಿರಂಜನ್ ಅವರ ಹುಟ್ಟುಹಬ್ಬ. ಚಿತ್ರದಲ್ಲಿ ನಾಯಕ ನಿರಂಜನ್ ನದ್ದು ಅಂತಾರಾಷ್ಟ್ರೀಯ ಡ್ಯಾನ್ಸರ್ ಪಾತ್ರ. ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ, ಯೋಗಿ ಛಾಯಾಗ್ರಹಣವಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು