ಸಿನಿಮಾ ಸುದ್ದಿ

ಕೆಜಿಎಫ್ ಚಾಪ್ಟರ್-2; 'ವಿಲನ್ ಕಮಿಂಗ್'; ತಲೆಗೆ ಹುಳ ಬಿಟ್ಟ ಯಶ್!

Srinivasamurthy VN

ಬೆಂಗಳೂರು: ತೀವ್ರ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್ ಚಿತ್ರದ ಚಾಪ್ಟರ್-2 ಕುರಿತು ನಟ ಯಶ್ ಹೊಸ ಅಪ್ ಡೇಟ್ ನೀಡಿದ್ದು, ಇದೇ ಸೋಮವಾರ ವಿಲನ್ ಆಗಮಿಸುತ್ತಿದ್ದಾನೆ ಎಂದು ಹೇಳಿದ್ದಾರೆ.

ಈ ಕುರಿತಂತೆ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಯಶ್, ಈ ಸಲ ಹೀರೋ ಬರುವುದಿಲ್ಲ. ಬದಲಿಗೆ ವಿಲನ್​ ಆಗಮನವಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಈ ಕಿರು ಮೋಷನ್​ ಪೋಸ್ಟರ್ ಕೆಜಿಎಫ್​ ಚಿತ್ರದ್ದೆ? ಅಥವಾ ಈ ಹಿಂದೆ ಯಶ್ ಬಿಯರ್ಡ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಆ ಜಾಹೀರಾತಿನ ಮೊದಲ ಲುಕ್​ ನೋಡಿ, ಕೆಜಿಎಫ್ ಸಿನಿಮಾದ್ದೇ ಹೊಸ ಸುದ್ದಿ ಇರಬಹುದಾ ಎನ್ನಲಾಗಿತ್ತು. ಆದರೆ, ಕೊನೆಗೆ ಅದು ಜಾಹೀರಾತು ಎಂದು ಗೊತ್ತಾಯ್ತು. 

ಅದೇ ರೀತಿ ಈ ಬಾರಿ ಕೂಡ ಬೇರೆ ಯಾವುದಾದರೂ ಹೊಸ ಜಾಹಿರಾತಿನ ಮೂಲಕ ಯಶ್ ಆಗಮಿಸುತ್ತಿದ್ದಾರೆಯೇ ಎಂದು ಅಭಿಮಾನಿಗಳು ಶಂಕಿಸುತ್ತಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಆಗಸ್ಟ್ 17ರಂದು ಉತ್ತರ ದೊರೆಯಲಿದೆ.

SCROLL FOR NEXT