ವಿರೇಶ್ 
ಸಿನಿಮಾ ಸುದ್ದಿ

'ಚಿತ್ರ ಲೋಕ' ಗೆ ಯು ಟ್ಯೂಬ್ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ

ಕನ್ನಡ ಚಿತ್ರರಂಗದ ಮೊದಲ ಪೋರ್ಟಲ್ ಎನಿಸಿರುವ ಚಿತ್ರಲೋಕ ಡಾಟ್ ಕಾಮ್ ಇನ್ನೊಂದು ಹೊಸ ಮೈಲಿಗಲ್ಲು ಸಾಧಿಸಿದೆ. ಯು ಟ್ಯೂಬ್ ನಲ್ಲಿ ಚಿತ್ರ ಲೋಕ ಚಾನೆಲ್ ಗೆ ಒಂದು ಲಕ್ಷ ಸಬ್ ಸ್ಕ್ರೈಬರ್ಸ್ ಆಗಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರರಂಗದ ಮೊದಲ ಪೋರ್ಟಲ್ ಎನಿಸಿರುವ ಚಿತ್ರಲೋಕ ಡಾಟ್ ಕಾಮ್ ಇನ್ನೊಂದು ಹೊಸ ಮೈಲಿಗಲ್ಲು ಸಾಧಿಸಿದೆ. ಯು ಟ್ಯೂಬ್ ನಲ್ಲಿ ಚಿತ್ರ ಲೋಕ ಚಾನೆಲ್ ಗೆ ಒಂದು ಲಕ್ಷ ಸಬ್ ಸ್ಕ್ರೈಬರ್ಸ್ ಆಗಿದ್ದಾರೆ. ಈ ಸಾಧನೆಯನ್ನು ಗುರುತಿಸಿರುವ ಯು ಟ್ಯೂಬ್ ಸಂಸ್ಥೆಯು, ಯು ಟ್ಯೂಬ್ ಸಿಲ್ವರ್ ಕ್ರಿಯೇಟರ್ ಅವಾರ್ಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಯು ಟ್ಯೂಬ್ ನಲ್ಲಿ ಯಾವುದೇ ಚಾನೆಲ್ ಗೆ ಒಂದು ಲಕ್ಷ ಚಂದಾದಾರಾದ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪ್ರಶಸ್ತಿಯನ್ನು ಪಡೆದಿರುವ ಕನ್ನಡ ಕೆಲವು ಬೆರಳಣಿಕೆಯಷ್ಟು ಚಾನೆಲ್ ಗಳಲ್ಲಿ ಚಿತ್ರ ಲೋಕ ಸಹ ಒಂದಾಗಿರುವುದು ವಿಶೇಷವಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ  ಯೂ ಟ್ಯೂಬ್ ನ ಚಿತ್ರ ಲೋಕ ಚಾನೆಲ್ ನಲ್ಲಿ ಹಲವು ವಿಭಿನ್ನ ಮತ್ತು ವಿನೂತನ ಹೆಜ್ಜೆಗಳನ್ನು ಇಟ್ಟಿದೆ. ಡಾ. ರಾಜ್ ಕುಮಾರ್ ಅವರ ಕಿಡ್ನಾಪ್ ಕುರಿತು ಯಾರಿಗೂ ಗೊತ್ತಿಲ್ಲದ ಮತ್ತು ಇದುವರೆಗೂ ಯಾರೂ ಕೇಳರಿಯದ ಹಲವು ವಿಷಯಗಳನ್ನು ತನ್ನ ಯುಟ್ಯೂಬ್ ಚಾನೆಲ್ ನ ಮೂಲಕ ಚಿತ್ರ ಲೋಕ ಹಂಚಿಕೊಂಡಿದೆ.

ಡಾ. ರಾಜ್ ಕುಮಾರ್ ಅವರ ಹತ್ತಿರದವರಿಂದ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ, ಕೆಲವರನ್ನು ನೇರವಾಗಿ ಸಂದರ್ಶನ ಮಾಡಿ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ ಎಂದು ಚಿತ್ರಲೋಕ ಡಾಟ್ ಕಾಮ್ ನ ವಿರೇಶ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆ, 20 ಸಚಿವರ ಪಟ್ಟಿಗೆ ಹೈಕಮಾಂಡ್ ಅಸ್ತು..?

ಪೆರುವಿನಲ್ಲಿ ಭೀಕರ ದುರಂತ: ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿ ಸ್ಫೋಟಗೊಂಡ ವಿಮಾನ, 11 ವಿದೇಶಿ ಪ್ರವಾಸಿಗರು ಸೇರಿ 13 ಮಂದಿ ದುರ್ಮರಣ..!

35 ವರ್ಷಗಳಿಂದ ಲೆಕ್ಕಪರಿಶೋಧನೆ ಇಲ್ಲ...! ಕೂಡಲಸಂಗಮ ಮಂಡಳಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ DCM ಪರಮೇಶ್ವರ್..!

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!