ದೀಪಕ್ ಅರಸ್ ನಿರ್ದೇಶನದ 'ಶುಗರ್ ಫ್ಯಾಕ್ಟರಿ'ಗೆ ಅದ್ವಿತಿ ಶೆಟ್ಟಿ ಸೇರ್ಪಡೆ
ನಟಿ ಅಮೂಲ್ಯ ಸೋದರ ದೀಪಕ್ ಅರಸ್ ನಿರ್ದೇಶಿಸುತ್ತಿರುವ ಕಾಮಿಡಿ ಸಿನಿಮಾ ಶುಗರ್ ಫ್ಯಾಕ್ಟರಿಗೆ ನಟಿ ಅದ್ವಿತಿ ಶೆಟ್ಟಿ ಸೇರಿಕೊಂಡಿದ್ದಾರೆ.
ನಟಿ ಅಮೂಲ್ಯ ಸೋದರ ದೀಪಕ್ ಅರಸ್ ನಿರ್ದೇಶಿಸುತ್ತಿರುವ ಕಾಮಿಡಿ ಸಿನಿಮಾ ಶುಗರ್ ಫ್ಯಾಕ್ಟರಿಗೆ ನಟಿ ಅದ್ವಿತಿ ಶೆಟ್ಟಿ ಸೇರಿಕೊಂಡಿದ್ದಾರೆ.
ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ಗ್ಲಾಮರ್ ಬೊಂಬೆ ಅದ್ವಿತಿ ಶೆಟ್ಟಿ ಸೇರಿದಂತೆ ಮೂವರು ನಟಿಯರು ಅಭಿನಯಿಸಲಿದ್ದಾರೆ. ಈಗಾಗಲೇ ನಟಿ ಸೋನಾಲ್ ಮಾಂಟೇರಿಯೋ ಫೈನಲ್ ಆಗಿದ್ದು ಇನ್ನೊಬ್ಬ ನಾಯಕಿಯ ಆಯ್ಕೆ ಬಾಕಿ ಉಳಿದಿದೆ, ಸದ್ಯ ಅದ್ವಿತಿ ಶೆಟ್ಟಿ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಧರ್ಮ ಕೀರ್ತಿರಾಜ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ
ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ.ದೀಪರ್ ಅರಸ್ ಸಿನಿಮಾ ನನಗೆ ಬಿಗ್ ಬ್ರೇಕ್ ನೀಡಲಿದೆ, ಜನವರಿಯಿಂದ ಶೂಟಿಂಗ್ ಆರಂಭವಾಗಲಿದ್ದು, ಫೆಬ್ರವರಿಯಲ್ಲಿ ತಾವು ಸೆಟ್ ಸೇರುವುದಾಗಿ ಅದ್ವಿತಿ ತಿಳಿಸಿದ್ದಾರೆ.
ಗಿರೀಶ್ ಸುಂಡರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ದೀಪಕ್ ಅರಸ್ ಚಿತ್ರಕತೆ ಬರೆದಿದ್ದಾರೆ, ಚೇತನ್ ಕುಮಾರ್ ಸಂಭಾಷಣೆಯಿದೆ, ಕಬೀರ್ ರಫಿ ಸಂಗೀತ ನೀಡಿದ್ದಾರೆ. ಬೆಂಗಳೂರು, ಮೈಸೂರು ಗೋವಾ ಮತ್ತು ಭಾರತದ ಹೊರಗೂ ಸಿನಿಮಾ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.